ಕಾಂಗ್ರೆಸ್ ನವರಿಗೆ ತಮ್ಮ ನಾಯಕರು ಯಾರು ಎಂಬುದೇ ಗೊತ್ತಿಲ್ಲ: ಕೆ.ಎಸ್.ಈಶ್ವರಪ್ಪ

Update: 2019-09-19 15:54 GMT

ದಾವಣಗೆರೆ, ಸೆ.19: ಕಾಂಗ್ರೆಸ್‍ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾರು, ವಿಧಾನ ಸಭೆ ಪ್ರತಿಪಕ್ಷದ ನಾಯಕ ಯಾರು ಅಂತಲೇ ಗೊತ್ತಿಲ್ಲ. ಕಾಂಗ್ರೆಸ್ ಇದೇ ಎಂಬುದು ಗೊತ್ತಾಗುತ್ತಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು. 

ತಾಲೂಕಿನ ಸಿರಮಗೊಂಡನಹಳ್ಳಿನ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ತಮ್ಮ ನಾಯಕರು ಯಾರು ಎಂಬುದು ಗೊತ್ತಿಲ್ಲ. ಕೆಜಿಪಿ ಬಿಜೆಪಿ ಒಡೆದು ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ತಾನೇ ದೇವರಾಜ ಅರಸು ಎಂಬಂತೆ ಬಿಂಬಿಸಿಕೊಂಡರು. ಅದು ಸುಳ್ಳಾಗಿದೆ. ಈಗ ಪರಿಸ್ಥಿತಿ ಬದಲಾಗಿದೆ ಎಂದರು. 

ನೆರೆ ಸಂತ್ರಸ್ತರ ವಿಚಾರ ಕಾಂಗ್ರೆಸ್ ಎತ್ತಿಕೊಳ್ಳುವುದು ಕುತಂತ್ರವಾಗಿದೆ. ಬೆಳಗಾವಿ ಸುವರ್ಣ ಸೌಧದಲ್ಲಿ ಹತ್ತು ಹನ್ನೆರಡು ಇಲಾಖೆಗಳ ಕಚೇರಿ ಆರಂಭಿಸಲು ಸರ್ಕಾರ ನಿರ್ಧರಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಜಲ ಪ್ರಳಯ- ಬರ ಎರಡೂ ಉಂಟಾಗಿದೆ. ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ಸೀತಾರಾಮನ್ ಬಂದು ಪರಿಶೀಲನೆ ನಡೆಸಿದ್ದಾರೆ. ಕೇಂದ್ರದಿಂದ ತಂಡ ಬಂದು ವರದಿ ನೀಡಿದೆ. ದೇಶದ 10 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಜಲಪ್ರಳಯವಾಗಿದೆ. ಅದ್ದರಿಂದ ಅನುದಾನ ವಿಳಂಬವಾಗಿದೆ. ಶೀಘ್ರವೇ ರಾಜ್ಯಕ್ಕೆ ಅತಿ ಹೆಚ್ಚು ಅನುದಾನ ಬರುವ ವಿಶ್ವಾಸವಿದೆ ಎಂದರು.

ಮನೆ ಬಿದ್ದುವರಿಗೆ 1 ಲಕ್ಷ ನೀಡುತ್ತವೆ. ಅದಕ್ಕಾಗಿ 1 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. 500 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ಥಿ ಮಾಡಲಾಗುವುದು. ನೆರೆ ಪ್ರದೇಶಗಳನ್ನು ಸಹಜ ಸ್ಥಿತಿಗೆ ತರಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಸಂಘ ಸಂಸ್ಥೆಗಳು ನಿರೀಕ್ಷೆಗೂ ಮೀರಿ ಸಹಾಯ ಮಾಡಿವೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News