ಸಿಎಂ ಪರಿಹಾರ ನಿಧಿ ಖಾತೆಗೆ 137.32 ಕೋಟಿ ರೂ. ದೇಣಿಗೆ

Update: 2019-09-19 16:26 GMT

ಬೆಂಗಳೂರು, ಸೆ.19: ರಾಜ್ಯದ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸಿರುವ ನಾಡಿನ ಜನತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸ್ವಯಂ ಸ್ಫೂರ್ತಿಯಿಂದ ದೇಣಿಗೆ ನೀಡುತ್ತಿದ್ದು, ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಖಾತೆಗೆ ಆ.9 ರಿಂದ ಸೆ.18ರವರೆಗೆ 137.32 ಕೋಟಿ ರೂ. ದೇಣಿಗೆ ಜಮಾ ಆಗಿದೆ.

ಉದ್ಯಮಿಗಳು, ಸೇವಾ ಸಂಸ್ಥೆಗಳು, ಸಾರ್ವಜನಿಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರ ನೆರವಿಗೆ ದೇಣಿಗೆ ನೀಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ದೇಣಿಗೆ ನೀಡಲು ಬಯಸುವವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಈ ಕೆಳಕಂಡ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್‌ನಲ್ಲಿ ದೇಣಿಗೆ ಜಮಾ ಮಾಡಬಹುದು. ಅಥವಾ ಚೆಕ್ ಅಥವಾ ಡಿಡಿ ಮೂಲಕವೂ ದೇಣಿಗೆ ನೀಡಬಹುದು.

Bank: State Bank of India,“Branch: Vidhanasoudha“A/C No. 37887098605“IFSC Code: SBIN0040277“MICR No: 56002419   

Bank Name: HDFC Bank Ltd.“Branch: Seshadripuram, Bangalore“A/C No.: 50100309178784“IFSC Code: HDFC0000367“MICR Code: 560240018)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News