ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವರಲಕ್ಷ್ಮಿ ಆನೆ ವಾಪಸ್ ಕಾಡಿಗೆ

Update: 2019-09-20 17:49 GMT
ಫೈಲ್ ಚಿತ್ರ

ಮೈಸೂರು,ಸೆ,20: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿರುವ ದಸರಾ ಗಜಪಡೆ ಆನೆಗಳು ಮೈಸೂರು ಅರಮನೆಯಲ್ಲಿ ಬೀಡುಬಿಟ್ಟಿವೆ. ಈ ನಡುವೆ ಈಶ್ವರ ಆನೆಯ ಬಳಿಕ ಇದೀಗ ವರಲಕ್ಷ್ಮೀ ಆನೆ ದಸರಾ ಗಜಪಡೆ ಕ್ಯಾಂಪ್ ನಿಂದ ಕಾಡಿಗೆ ವಾಪಸ್ ಆಗಿದೆ.

ವರಲಕ್ಷ್ಮೀ ಆನೆ ಗರ್ಭಿಣಿಯಾಗಿದ್ದು ಈ ಹಿನ್ನೆಲೆಯಲ್ಲಿ ವರಲಕ್ಷ್ಮೀಯನ್ನು ಮತ್ತೆ ಶಿಬಿರಕ್ಕೆ ಅರಣ್ಯಾಧಿಕಾರಿಗಳು ಕಳುಹಿಸಿಕೊಟ್ಟಿದ್ದಾರೆ. ವರಲಕ್ಷ್ಮೀ ಆನೆಯನ್ನು ಲಾರಿಯಲ್ಲಿ ಅರಮನೆಯಿಂದ ಕಾಡಿಗೆ ವಾಪಸ್ ಕರೆದೊಯ್ಯಲಾಗಿದೆ. ಗರ್ಭಿಣಿಯಾಗಿರುವ ಹಿನ್ನೆಲೆ ವರಲಕ್ಷ್ಮೀ ಆನೆ ಎರಡನೇ ಹಂತದ ತಾಲೀಮಿನಲ್ಲಿ ಪಾಲ್ಗೊಂಡಿರಲಿಲ್ಲ. 

ನಗರದ ವಾತಾವರಣಕ್ಕೆ ಹೊಂದಿಕೊಳ್ಳದ ಹಿನ್ನೆಲೆ ಈಶ್ವರ ಆನೆಯನ್ನು ಗಜಪಡೆ ಕ್ಯಾಂಪ್ ನಿಂದ ಕಾಡಿಗೆ ವಾಪಸ್ ಕಳುಹಿಸಲಾಗಿತ್ತು. ಈ ಮಧ್ಯೆ ತಾಲೀಮು ನಡೆಸುತ್ತಿದ್ದ ವೇಳೆ ಈಶ್ವರ ಆನೆ ಗಾಬರಿಯಾಗಿತ್ತು. ಈ ಬಗ್ಗೆ ಸಚಿವ ವಿ.ಸೋಮಣ್ಣ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಈಶ್ವರ ಆನೆಯನ್ನು ವಾಪಸ್ ಕಳುಹಿಸಲಾಗಿತ್ತು, ಮತ್ತೆ ಕರೆಸಿಕೊಳ್ಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News