ನೂತನ ಮೋಟರ್ ಕಾಯ್ದೆ: ದಂಡದ ಮೊತ್ತ ಇಳಿಸಿ ರಾಜ್ಯ ಸರ್ಕಾರ ಆದೇಶ

Update: 2019-09-21 16:09 GMT

ಬೆಂಗಳೂರು, ಸೆ.21: ಭಾರಿ ಚರ್ಚೆಗೆ ಗ್ರಾಸವಾಗಿದ್ದ ಸಂಚಾರ ನಿಯಮ ಉಲ್ಲಂಘನೆಯ ದಂಡ ಮೊತ್ತವನ್ನು ಇಳಿಕೆ ಮಾಡಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ.

ಹೊಸ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ ಸೆ.3ರಿಂದ ಜಾರಿಗೆ ಬಂದ ಬಳಿಕ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸವಾರರಿಗೆ ಭಾರೀ ದಂಡ ವಿಧಿಸಲಾಗುತ್ತಿದೆ. ಇದಕ್ಕೆ ಬೇಸತ್ತ ಸಾರ್ವಜನಿಕರು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ, ಗುಜರಾತ್ ಬಳಿಕ ಕರ್ನಾಟಕ ರಾಜ್ಯ ಸರಕಾರ ದುಬಾರಿ ದಂಡದ ಮೊತ್ತವನ್ನು ಇಳಿಕೆ ಮಾಡಿದೆ.

ಆದರೆ, ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರಿಗೆ ಮಾತ್ರ ದಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೊಸ ಕಾನೂನಿನಲ್ಲಿ ಇದ್ದ 10 ಸಾವಿರ ದಂಡವನ್ನು ರಾಜ್ಯ ಸರಕಾರ ಮುಂದುವರಿಸಿ ಅಧಿಕೃತ ಆದೇಶ ಹೊರಡಿಸಿದೆ.

ದಂಡದ ಮೊತ್ತ: ಯಾವುದಕ್ಕೆ ಎಷ್ಟು?

* ಟಿಕೆಟ್ ಇಲ್ಲದೆ ಪ್ರಯಾಣ-500 ರೂ.

* ಅನಧಿಕೃತ ವ್ಯಕ್ತಿಗಳಿಗೆ ವಾಹನ ನೀಡಿದ ಮಾಲಕರಿಗೆ -ಬೈಕ್, ಸ್ಕೂಟರ್-1 ಸಾವಿರ ರೂ, -ಲಘು- 2ಸಾವಿರ ರೂ, ಇತರೆ-5 ಸಾವಿರ ರೂ.

* ಹೆಲ್ಮೆಟ್ ರಹಿತ ಚಾಲನೆ (ಸವಾರ/ಹಿಂಬದಿ ಸವಾರ); ತಲಾ 500

* ತುರ್ತು ವಾಹನಗಳಿಗೆ ದಾರಿ ಬಿಡದಿರುವುದು-1 ಸಾವಿರ ರೂ.

* ನಿಶ್ಯಬ್ದ ವಲಯದಲ್ಲಿ ಶಬ್ದ ಮಾಡಿದರೆ- ದ್ವಿಚಕ್ರ, ತ್ರಿಚಕ್ರ-500 ರೂ., ಇತರೆ 1 ಸಾವಿರ ರೂ.

* ವಿಮೆ ಇಲ್ಲದ್ದಕ್ಕೆ- ದ್ವಿಚಕ್ರ, ತ್ರಿಚಕ್ರ-1 ಸಾವಿರ ರೂ. ಲಘು 2 ಸಾವಿರ ರೂ. ಇತರೆ 4 ಸಾವಿರ ರೂ.

* ಏಕಮುಖ ರಸ್ತೆಯಲ್ಲಿ ಚಾಲನೆ- 1 ಸಾವಿರ ರೂ.

* ಹೆಚ್ಚು ಭಾರ ಸಾಗಣೆ; 5 ಸಾವಿರ ರೂ., (ಪ್ರತಿ ಟನ್‌ಗೆ 2ಸಾವಿರ)

* ಹೆಚ್ಚು ಪ್ರಯಾಣಿಕರು; ಪ್ರಯಾಣಿಕನಿಗೆ ತಲಾ 200

* ಸೀಟ್ ಬೆಲ್ಟ್ ಇಲ್ಲದಿದ್ದರೆ- 500 ರೂ.

* ಅನಧಿಕೃತ ವ್ಯಕ್ತಿಯಿಂದ (ಅಪ್ರಾಪ್ತರು) ವಾಹನ ಚಾಲನೆ- ದ್ವಿಚಕ್ರ-1ಸಾವಿರ ರೂ, ಲಘು-2ಸಾವಿರ ರೂ, ಇತರೆ-5 ಸಾವಿರ ರೂ.

* ಪರವಾನಿಗೆ ಸಂಬಂಧಿಸಿದ ನಿಯಮ ಉಲ್ಲಂಘನೆ-10 ಸಾವಿರ ರೂ.

* ಆಕಾರ ಬದಲಿಸಿದ ವಾಹನಗಳ ನೋಂದಾಯಿಸಿದ ಸಾರಿಗೆ ಇನ್‌ಸ್ಪೆಕ್ಟರ್‌ಗಳಿಗೆ-10 ಸಾವಿರ ರೂ.

* ಅತಿವೇಗ ಚಾಲನೆ; ದ್ವಿಚಕ್ರ, ತ್ರಿಚಕ್ರ, ಲಘು-1 ಸಾವಿರ, ಭಾರಿ ವಾಹನ-2 ಸಾವಿರ ರೂ.

* ಅಪಾಯಕಾರಿ ಚಾಲನೆ; ಪ್ರಥಮ ಬಾರಿಗೆ (ದ್ವಿಚಕ್ರ, ತ್ರಿಚಕ್ರ) 1,500 ರೂ.

* ಲಘು-3 ಸಾವಿರ ರೂ, ಇತರೆ-5 ಸಾವಿರ ರೂ. ಎರಡನೇ ಬಾರಿಗೆ 10 ಸಾವಿರ ರೂ.

* ದೈಹಿಕ ಸಮರ್ಥರಿಲ್ಲದೆ ಚಾಲನೆ; ಪ್ರಥಮ ಬಾರಿ-1 ಸಾವಿರ ರೂ. ಎರಡನೇ ಬಾರಿಗೆ 2 ಸಾವಿರ ರೂ.

* ರೇಸಿಂಗ್; ಪ್ರಥಮ 5 ಸಾವಿರ ರೂ. ಎರಡನೇ ಬಾರಿಗೆ 10 ಸಾವಿರ ರೂ.

* ಸುರಕ್ಷಿತವಲ್ಲದ ವಾಹನಗಳ ಚಾಲನೆ; ದ್ವಿಚಕ್ರ, ತ್ರಿಚಕ್ರ-1,500, ಇತರೆ 3 ಸಾವಿರ ರೂ.

* ವಾಯುಮಾಲಿನ್ಯಕ್ಕೆ ದ್ವಿಚಕ್ರ, ತ್ರಿಚಕ್ರ -1,500 ರೂ. ಇತರೆ 3 ಸಾವಿರ ರೂ. * ಶಬ್ದಮಾಲಿನ್ಯಕ್ಕೆ ದ್ವಿಚಕ್ರ, ತ್ರಿಚಕ್ರ-1,500, ಇತರೆ-3 ಸಾವಿರ ರೂ.

* ನೋಂದಣಿ ಮಾಡಿಸದೆ ಚಾಲನೆ; ದ್ವಿಚಕ್ರ, ತ್ರಿಚಕ್ರ 2 ಸಾವಿರ ರೂ. ಲಘು ವಾಹನ-3 ಸಾವಿರ ರೂ.. ಇತರೆ 5 ಸಾವಿರ ರೂ.

* ಪರ್ಮಿಟ್ ಇಲ್ಲದೆ ಚಾಲನೆ; ಪ್ರಥಮ 5 ಸಾವಿರ ರೂ. ಎರಡನೇ 10 ಸಾವಿರ ರೂ.

* ಸಾಮಾನ್ಯ ನಿಯಮ ಉಲ್ಲಂಘನೆಗಳಿಗೆ; ಪ್ರಥಮ 500 ರೂ. ಎರಡನೇ ಬಾರಿಗೆ 1 ಸಾವಿರ ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News