ಪೋಲಿಯೊ ಹನಿ ಶೇ.100ರಷ್ಟು ಸುರಕ್ಷಿತ: ಆರೋಗ್ಯ ಇಲಾಖೆ

Update: 2019-09-22 17:32 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.22: ಪೋಲಿಯೊ ಹನಿ ಶೇ.100ರಷ್ಟು ಸುರಕ್ಷಿತವಾಗಿದೆ. ಪೋಲಿಯೊ ಹನಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿ ಸತ್ಯಕ್ಕೆ ದೂರವಾದುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

ವಾಟ್ಸ್‌ಆ್ಯಪ್‌ನಲ್ಲಿ ಎರಡು ಮೂರು ದಿನದಿಂದ ಪೋಲಿಯೊ ಕಾರ್ಯಕ್ರಮದ ವಿರುದ್ಧ ಸಂದೇಶಗಳು ಹರಿದಾಡುತ್ತಿರುವುದು ಸುಳ್ಳು ಮಾಹಿತಿಯಾಗಿದೆ. 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸುವುದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಭಾರತ 2014ರಲ್ಲೇ ವಿಶ್ವಸಂಸ್ಥೆಯಿಂದ ಪೋಲಿಯೊ ಮುಕ್ತ ರಾಷ್ಟ್ರ ಎಂಬ ಮನ್ನಣೆ ಪಡೆದಿದೆ.

ಈ ಕಾರ್ಯಕ್ರಮದ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಮಾಹಿತಿ ಹರಿದಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಯಾರೂ ತಪ್ಪು ಮಾಹಿತಿ ಹರಡಬಾರದು ಎಂದು ಇಲಾಖೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News