ಹುಣಸೂರು ಉಪಚುನಾವಣೆ: ಎರಡು ನಾಮಪತ್ರ ಸಲ್ಲಿಕೆ
Update: 2019-09-23 20:35 IST
ಮೈಸೂರು,ಸೆ.23: ಮೈಸೂರು ಜಿಲ್ಲೆಯ ಹುಣಸೂರು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ.
ಮೊದಲನೆ ದಿನವಾದ ಇಂದು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಕರಿಯಪ್ಪ ಮತ್ತು ಎಂ.ದೇವರಾಜು ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಹುಣಸೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ತಿಳಿಸಿದ್ದಾರೆ.