ಪ್ರಭಾರ ಹುದ್ದೆಗೆ ಸೇವಾ ಹಿರಿತನ ಪರಿಗಣನೆಗೆ ಒತ್ತಾಯಿಸಿ ಧರಣಿ

Update: 2019-09-23 18:20 GMT

ಮಂಡ್ಯ, ಸೆ.23: ವರ್ಗಾವಣೆಯಾಗಿರುವ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರ ಜಾಗಕ್ಕೆ ಪ್ರಭಾರ ಅಧಿಕಾರಿಯಾಗಿ ಸೇವಾ ಹಿರಿತನವಿರುವ ಡಾ.ಮಾದಪ್ಪ ಅವರನ್ನು ನೇಮಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಸೋಮವಾರ ಧರಣಿ ನಡೆಸಿದರು.

ಜಿಲ್ಲೆಯಲ್ಲಿ ಉಪನಿರ್ದೇಶಕರ ಹುದ್ದೆಗೆ ಸಮನಾಂತರ ಶ್ರೇಣಿಯ ಸೇವಾ ಹಿರಿತನವಿರುವ ಅಧಿಕಾರಿಗಳಿದ್ದರೂ ಅದನ್ನು ಕಡೆಗಣಿಸಿ  ಕೀಲಾರ ಆಸ್ಪತ್ರೆಯ ಪಶುವೈದ್ಯಾಧಿಕಾರಿ ಡಾ.ರಮೇಶ್‍ರಾಜು ಅವರನ್ನು ನಿಯಮಬಾಹಿರವಾಗಿ ಪ್ರಭಾರ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಅವರು ಆರೋಪಿಸಿದರು.
ಸೇವಾ ಹಿರಿತನಕ್ಕೆ ಮನ್ನಣೆ ನೀಡದೆ ರಾಜಕೀಯ ಪ್ರೇರಿತವಾಗಿ ಜಾತಿಯ ಪ್ರಾಬಲ್ಯಗಳಿಗೆ ಮನ್ನಣೆ ನೀಡಿ ದಲಿತ, ಶೋಷಿತ ಅಧಿಕಾರಿಗಳಿಗೆ ಅವಮಾನ ಮಾಡಿ ಕೆಸಿಎಸ್‍ಆರ್ ನಿಯಮವನ್ನು ಉಲ್ಲಂಘಟನೆ ಮಾಡಲಾಗಿದೆ ಎಂದು ಅವರು ದೂರಿದರು.

ಆಗಿರುವ ತಪ್ಪನ್ನು ಸರಿಪಡಿಸಿ, ನಿಯಮಾನುಸಾರ ಸೇವಾ ಹಿರಿತವ ಹೊಂದಿರುವ ಡಾ.ಮಾದಪ್ಪ ಅವರನ್ನು ಪ್ರಭಾರ ಉಪನಿರ್ದೇಶಕರನ್ನಾಗಿ ನೇಮಿಸಿ, ಡಾ.ರಮೇಶ್‍ರಾಜು ಅವರನ್ನು ಬಿಡುಗಡೆ ಮಾಡಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್, ಜಿಲ್ಲಾ ಸಂಚಾಲಕ ಸ್ವಾಮಿ ಹೊಸೂರು, ಚುಂಚಯ್ಯ, ಪವನ್, ಎಚ್.ಪಿ.ಜವರಯ್ಯ, ರವಣಯ್ಯ, ರಮೇಶ್, ಇತರರು ಧರಣಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News