ದೇಶಕ್ಕೆ ಅಕ್ರಮ ಪ್ರವೇಶ: ಬಾಂಗ್ಲಾ ನಿವಾಸಿಗೆ ಎರಡು ವರ್ಷ ಜೈಲು ಶಿಕ್ಷೆ

Update: 2019-09-26 17:54 GMT

ದಾವಣಗೆರೆ, ಸೆ.26: ಅಕ್ರಮವಾಗಿ ನುಸುಳಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ನಿವಾಸಿ ಹಸೀಯಾ ಅಲಿಯಾಸ್ ಆಸ್ಮಾ (30) ಆರೋಪಿಗೆ ಇಲ್ಲಿನ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕುಲಕರ್ಣಿ ಅಂಬಾದಾಸ್ ಅವರು ಎರಡು ವರ್ಷ ಜೈಲು ಶಿಕ್ಷೆ 10 ಸಾವಿರ ರೂಪಾಯಿ ದಂಡ ತೀರ್ಪು ನೀಡಿದ್ದಾರೆ.  

ಘಟನೆ ವಿವರ: ಬಾಂಗ್ಲಾದೇಶದ ದಾಲ್ ಚೋಡಾ ಜಿಲ್ಲೆಯ ಭರತ್‍ಪುರ್ ಗ್ರಾಮದ ಮಹಿಳೆ ಹಸೀಯಾ ಅಲಿಯಾಸ್ ಆಸ್ಮಾ ಅವರು ಭಾರತವನ್ನು ಅಕ್ರಮವಾಗಿ ಪ್ರವೇಶಿಸಿ ರೈಲು ಮುಖಾಂತರ 18.06.2018 ರಂದು ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ದಾವಣಗೆರೆ ಮೈತ್ರಿ ಉಜ್ವಲ್ ಪುನರ್ ವಸತಿ ಕೇಂದ್ರದ ಸಿಬ್ಬಂದಿಯವರು ಅವರನ್ನು ವಿಚಾರಿಸಿ ಮಾಹಿತಿ ಪಡೆದುಕೊಂಡು ಬಡಾವಣೆ ಠಾಣೆಗೆ ದೂರು ಸಲ್ಲಿಸಿದ್ದರು.  

ಈ ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರದಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸುಧೀರ್ಘ ವಿಚಾರಣೆ ನಡೆದು ಸದರಿ ಅರೋಪಿ ವಿರುದ್ಧ ಭಾರತದಲ್ಲಿ ಅಕ್ರಮ ಪ್ರವೇಶ ಮಾಡಿ ವಿದೇಶಿಯರ ಕಾಯ್ದೆ ಮತ್ತು ಪಾಸ್‍ಪೋರ್ಟ್ ನಿಯಮಗಳ ಅನ್ವಯ ಉಲ್ಲಂಘಟನೆ ಮಾಡಿದ ಸಾಬೀತದ ಹಿನ್ನೆಲೆ ನ್ಯಾಯಾಧೀಶರು ಶಿಕ್ಷೆ ನೀಡಿ ತೀರ್ಪು ನೀಡಿದ್ದು, ಶಿಕ್ಷೆ ಮುಗಿದ ನಂತರ ಆರೋಪಿಯನ್ನು ಅವರ ದೇಶಕ್ಕೆ ಗಡಿಪಾರು ಮಾಡಲು ಆದೇಶ ನೀಡಿದ್ದಾರೆ. 

ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಎಸ್.ವಿ.ಪಾಟೀಲ್ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News