ಸಚಿವರಿಗೆ ಹೆಚ್ಚುವರಿ ಖಾತೆಗಳ ಹಂಚಿಕೆ
ಬೆಂಗಳೂರು, ಸೆ.27: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಳಿ ಇದ್ದ ಹೆಚ್ಚುವರಿ ಖಾತೆಗಳನ್ನು, ಸಿಎಂ ಶಿಫಾರಸು ಮೇರೆಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಇಬ್ಬರು ಡಿಸಿಎಂಗಳಿಗೆ ಹಾಗೂ ಸಚಿವರಿಗೆ ಹಂಚಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಇಬ್ಬರು ಉಪ ಮುಖ್ಯಮಂತ್ರಿಗಳಾದ ಡಾ.ಅಶ್ವತ್ ನಾರಾಯಣ(ವೈದ್ಯಕೀಯ ಶಿಕ್ಷಣ), ಲಕ್ಷ್ಮಣ್ ಸವದಿ(ಕೃಷಿ), ಸಚಿವರಾದ ಕೆ.ಎಸ್.ಈಶ್ವರಪ್ಪ(ಯುವಜನ ಮತ್ತು ಕ್ರೀಡಾ ಇಲಾಖೆ), ಆರ್.ಅಶೋಕ್(ಪುರಸಭೆ ಆಡಳಿತ, ಸ್ಥಳೀಯ ಸಂಸ್ಥೆ), ಜಗದೀಶ್ ಶೆಟ್ಟರ್(ಸಾರ್ವಜನಿಕ ಉದ್ಯಮಗಳು), ಬಿ.ಶ್ರೀರಾಮುಲು(ಹಿಂದುಳಿದ ವರ್ಗಗಳ ಕಲ್ಯಾಣ), ಎಸ್.ಸುರೇಶ್ ಕುಮಾರ್(ಕಾರ್ಮಿಕ), ವಿ.ಸೋಮಣ್ಣ(ತೋಟಗಾರಿಕೆ), ಸಿ.ಟಿ.ರವಿ(ಸಕ್ಕರೆ), ಬಸವರಾಜು ಬೊಮ್ಮಾಯಿ(ಸಹಕಾರ), ಸಿ.ಸಿ.ಪಾಟೀಲ್(ಅರಣ್ಯ, ಪರಿಸರ ವಿಜ್ಞಾನ ಹಾಗೂ ಪರಿಸರ), ಪ್ರಭು ಚವ್ಹಾಣ್(ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್), ಶಶಿಕಲಾ ಜೊಲ್ಲೆ(ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು), ಎಚ್.ನಾಗೇಶ್(ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ) ನೀಡಿ ರಾಜ್ಯಪಾಲು ಅಧಿಕೃತ ಆದೇಶ ಹೊರಡಿಸಿದ್ದಾರೆ.