ಮಹಿಷ ದಸರಾ ಆಚರಣೆಗೆ ಅಡ್ಡಿ ಆರೋಪ: ಪ್ರತಾಪ್‍ ಸಿಂಹ ವಿರುದ್ಧ ದಲಿತ ಮುಖಂಡರ ಧರಣಿ

Update: 2019-09-28 16:40 GMT

ಹಾಸನ, ಸೆ.28: ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ಅಡ್ಡಿ ಪಡಿಸಿದ್ದಾರೆಂದು ಆರೋಪಿಸಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ಮುಖಂಡರು ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂದೆ ಮಹಿಷಾಸುರ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸುವ ಮೂಲಕ ಮಹಿಷ ದಸರಾ ಆಚರಿಸಿ, ಪ್ರತಿಭಟನೆ ನಡೆಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಂತರಾಷ್ಟ್ರೀಯ ಕಲಾವಿದ ಕೆ.ಟಿ. ಶಿವಪ್ರಸಾದ್ ಮಾತನಾಡಿ, ಸಂಸದ ಪ್ರತಾಪ್ ಸಿಂಹ ಅವರಿಗೆ ಇತಿಹಾಸದ ಬಗ್ಗೆ ಅರಿವಿಲ್ಲ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಚಾಮುಂಡೇಶ್ವರಿ ಕೇವಲ ಕಾಲ್ಪನಿಕ ದೇವರು. ಆದರೆ ಮಹಿಷಿ ಬೌದ್ಧ ಬಿಕ್ಕುವಾಗಿದ್ದು, ಇವರು ಮೂಲ ನಿವಾಸಿಗಳಾಗಿದ್ದಾರೆ. ಇವರನ್ನು ನಾವು ಗೌರವಿಸುತ್ತೇವೆ ಹಾಗೂ ಕಾಲ್ಪನಿಕ ದೇವರನ್ನು ಹೊರಗಿಡುತ್ತೇವೆ ಎಂದರು.

ಮಹಿಷಾ ದಸರಾ ಆಚರಣೆಗೆ ಅವಕಾಶ ಮಾಡಿಕೊಟ್ಟಿದ್ದ ಪೊಲೀಸರಿಗೆ ಸಂಸದ ಅವಾಚ್ಯ ಶಬ್ದಗಳಿಂದ ನಿಂಧಿಸಿರುವುದು ಖಂಡನೀಯ ಎಂದ ಅವರು, ಪೊಲೀಸರಿಗೆ ಶಂಡ ಪದ ಬಳಸಿ ನಿಂದಿಸಿರುವ ಸಂಸದ ಪ್ರತಾಪ್ ಸಿಂಹನೇ ಒಬ್ಬ ಶಂಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸುವರ್ಣ ಶಿವಪ್ರಸಾದ್, ಆರ್.ಪಿಐ ಸತೀಶ್, ಮರಿಜೊಸೇಪ್, ವಿನೋದ್ ರಾಜ್, ಮಧು, ಹೇಮಂತ್, ಮುಬಷೀರ್ ಪಾಷ, ಕೆ. ಪ್ರಕಾಶ್ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News