ಎಸೆಸೆಲ್ಸಿ: ಖಾಸಗಿ ಅಭ್ಯರ್ಥಿಗಳ ನೋಂದಣಿಗೆ ಸುತ್ತೋಲೆ

Update: 2019-09-28 18:08 GMT

ಬೆಂಗಳೂರು, ಸೆ.28: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆ ಬರೆಯಲಿರುವ ಖಾಸಗಿ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ.

ಶೈಕ್ಷಣಿಕ ವರ್ಷದ ಮಾ.1 ಕ್ಕೆ 15 ವರ್ಷ ಪೂರೈಸಿರುವ ಅಭ್ಯರ್ಥಿಗಳು ಖಾಸಗಿ ಪರೀಕ್ಷೆ ಬರೆಯಲು ಅವಕಾಶವಿದೆ. ಅಂತಹ ಅಭ್ಯರ್ಥಿಗಳು ಸರಕಾರಿ ಅಥವಾ ಸರಕಾರದಿಂದ ಮಾನ್ಯತೆ ಪಡೆದ ಶಾಲೆಗಳಿಂದಲೇ ನೋಂದಣಿಗೆ ಅರ್ಜಿ ಸಲ್ಲಿಸಬೇಕು. 15 ವರ್ಷದೊಳಗಿನ ಅಭ್ಯರ್ಥಿಗಳ ನೋಂದಣಿ ಮಾಡಿಕೊಂಡಲ್ಲಿ ಶಾಲಾ ಮುಖ್ಯಸ್ಥರೇ ಜವಾಬ್ದಾರರಾಗುತ್ತಾರೆ.

ನೋಂದಣಿ ಮಾಡಿಕೊಳ್ಳುವವರು 15 ವರ್ಷಗಳು ತುಂಬಿರುವ ಸಂಬಂಧ ಅಭ್ಯರ್ಥಿಯ ಪಾಲಕ, ಪೋಷಕರ ಲಿಖಿತ ಒಪ್ಪಿಗೆ ಪತ್ರ ಪಡೆಯಬೇಕು. ಎಸೆಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಖಾಸಗಿ ಅಭ್ಯರ್ಥಿಯಾಗಿ ಬರೆಯಲು ಅವಕಾಶವಿರುವುದಿಲ್ಲ.

ಪರೀಕ್ಷಾ ನೋಂದಣಿಗೆ ಖಾಸಗಿ ಅಭ್ಯರ್ಥಿಗಳು ಮತ್ತು ಶಾಲೆಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಂಡಳಿ ವಿಸ್ತೃತವಾದ ಸುತ್ತೋಲೆ ಹೊರಡಿಸಿದ್ದು, ಮಾಹಿತಿಗಾಗಿ ಮಂಡಳಿಯ ವೆಬ್‌ಸೈಟ್ www.kseeb.kar.nic.in ನಲ್ಲಿ ಪ್ರಟಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News