ಓ ಮೆಣಸೇ…

Update: 2019-09-29 18:29 GMT

ಸಿದ್ದರಾಮಯ್ಯನವರ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ನಮ್ಮ ಪಕ್ಷದಲ್ಲಿ ಕಾರ್ಯಕರ್ತರೇ ಇರಲಿಲ್ಲ.

- ಕೆ.ಆರ್.ರಮೇಶ್ ಕುಮಾರ್, ಮಾಜಿ

ವಿಧಾನಸಭಾ ಸ್ಪೀಕರ್ ಈಗ ನಾಯಕರೂ ಉಳಿದಿಲ್ಲವಲ್ಲ?

---------------------

  ದೇಶ ಭಕ್ತಿ ಇದ್ದರೆ ಸಾಲದು ದೇಶದ ಬಗ್ಗೆ ಜ್ಞಾನವೂ ಇರಬೇಕು.
- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ವೇಷ ಭಕ್ತಿ ಇದ್ದವರು ಒಳ್ಳೆಯ ಲಾಯರ್‌ನ್ನು ಹೊಂದಿರುವುದು ಅತ್ಯಗತ್ಯ.

---------------------

ನಾನು ಈಗಲೂ ಎಚ್.ಡಿ. ದೇವೇಗೌಡರು ಮಾಡಿರುವ ಉಪಕಾರಕ್ಕೆ ದೇವರ ಮನೆಯಲ್ಲಿ ಅವರ ಫೋಟೊ ಇಟ್ಟು ಪೂಜಿಸುತ್ತೇನೆ.

- ಎಚ್. ವಿಶ್ವನಾಥ್, ಅನರ್ಹ ಶಾಸಕ
ದಿನ ಅವರ ತಲೆಯ ಮೇಲೆ ತೆಂಗಿನ ಕಾಯಿ ಒಡೆಯುತ್ತೀರಿ ಎನ್ನುವ ಆರೋಪವಿದೆ.

---------------------

ಗೃಹ ಬಂಧನದಲ್ಲಿರುವ ಕಾಶ್ಮೀರದ ರಾಜಕೀಯ 
ನೇತಾರರನ್ನು ಅತಿಥಿಗಳಂತೆ ನೋಡಿಕೊಳ್ಳಲಾಗುತ್ತಿದೆ.

- ಜಿತೇಂದ್ರ ಸಿಂಗ್, ಕೇಂದ್ರ ಸಚಿವ
ಅತಿಥಿಗಳಂತೆ ಬೇಡ, ಈ ದೇಶ ಪ್ರಜೆಗಳಂತೆ ನೋಡಿಕೊಳ್ಳಿ.

---------------------

ವಿಶ್ವದಲ್ಲಿ ಎಲ್ಲಿಯಾದರೂ ಕೈಗೆಟಕುವ ದರದಲ್ಲಿ ಡೇಟಾ ಲಭ್ಯವಿದ್ದರೆ ಅದು ಭಾರತದಲ್ಲಿ ಮಾತ್ರ.

- ನರೇಂದ್ರಮೋದಿ, ಪ್ರಧಾನಿ
ಹೌದು, ಈ ದೇಶದ ಜನರ ಡೇಟಾಗಳು ಇಂದು ಎಲ್ಲರ ಕೈಗೆಟಕುವಂತಿದೆ.

---------------------

‘ಪಾಕ್ ಆಕ್ರಮಿತ ಕಾಶ್ಮೀರ’ ಎಂಬ ಸಮಸ್ಯೆ ಸೃಷ್ಟಿಯಾಗಲು ಅಂದಿನ ಪ್ರಧಾನಿ ನೆಹರೂ ಅವರೇ ಕಾರಣ.

- ಅಮಿತ್ ಶಾ, ಕೇಂದ್ರ ಸಚಿವ
  ಗುಜರಾತ್ ಆಕ್ರಮಿತ ಭಾರತ ಎಂಬ ಸಮಸ್ಯೆ ಸೃಷ್ಟಿಯಾಗಲು ಕಾರಣ ಯಾರು?

---------------------

ಎನ್‌ಆರ್‌ಸಿಯಿಂದ ಒಬ್ಬ ಹಿಂದೂ ಕೂಡಾ ದೇಶ ತೊರೆಯುವುದಿಲ್ಲ.

- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಆರ್ಯರು ಹಿಂದೂಗಳಲ್ಲ ಎನ್ನುವ ವಾದವಿದೆ.

---------------------

ಪ್ರಧಾನಿ ಮೋದಿ ಏನೇ ಮಾಡಿದರೂ ಅದು ಸರಿಯಾಗಿಯೇ ಇರುತ್ತದೆ.

- ಎಸ್.ಎಲ್. ಭೈರಪ್ಪ, ಹಿರಿಯ ಸಾಹಿತಿ
ಏನೇ ಮಾಡಿದರೂ ಅದನ್ನು ಎತ್ತಿ ಬಾಯಿಗೆ ಹಾಕಿಕೊಳ್ಳುತ್ತೀರಿ ಎಂದಾಯಿತು.

---------------------

ಅನರ್ಹ ಶಾಸಕರು ಹಾಗೂ ಬಿಜೆಪಿಗೆ ನೆರೆ ಸಂತ್ರಸ್ತರ ಶಾಪ ತಟ್ಟಲಿದೆ.

- ಎಂ.ಬಿ. ಪಾಟೀಲ್, ಮಾಜಿ ಸಚಿವ

ಅನರ್ಹ ಶಾಸಕರೇ ಬಿಜೆಪಿಗೆ ಶಾಪವಾಗಿ ಪರಿವರ್ತನೆಯಾಗಿದ್ದಾರೆ.

---------------------

ಎಚ್.ಡಿ. ಕುಮಾರ ಸ್ವಾಮಿ ಧರ್ಮರಾಯ ಇದ್ದಹಾಗೆ. ಎಲ್ಲದಕ್ಕೂ ಯಸ್ ಅಂತಾರೆ.

- ಎಚ್.ಡಿ. ರೇವಣ್ಣ, ಮಾಜಿ ಸಚಿವ

 ದೇವೇಗೌಡರು ಧೃತರಾಷ್ಟ್ರ ಇದ್ದ ಹಾಗೆ, ಮಕ್ಕಳು ಏನು ಕೇಳಿದರು ಯಸ್ ಅಂತಾರಂತೆ.

---------------------
  ನಾನಿೀಗ ಕಾಡಿನಲ್ಲಿ ಕಳೆದು ಹೋದ ಮಗುವಿನಂತಾಗಿದ್ದೇನೆ.

- ಜಗ್ಗೇಶ್, ಬಿಜೆಪಿ ನಾಯಕ ಹಾಗೂ ನಟ

ಕಾಡಿನಲ್ಲಿ ಕಳೆದು ಹೋದ ‘ಕಳ್ಳೇಕಾಯಿ’ಯಂತೆ ಎಂದರೆ ಚೆನ್ನಾಗಿತ್ತು.

---------------------

ನೊಬೆಲ್ ಪ್ರಶಸ್ತಿಗೆ ನಾನು ಅರ್ಹ, ಆದರೆ ಅವರು ಅದನ್ನು ನನಗೆ ಕೊಡುವುದಿಲ್ಲ.

- ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಮೋದಿ ಮತ್ತು ನಿಮಗಿಬ್ಬರಿಗೂ ಜಂಟಿಯಾಗಿ ಗೊಬೆಲ್ ಪ್ರಶಸ್ತಿ ನೀಡಲಾಗುತ್ತದೆಯಂತೆ.

---------------------

ಒಳ ಪಂಗಡಗಳು ಒಗ್ಗೂಡಿದರೆ ವೀರ ಶೈವರನ್ನು ಮಣಿಸಲು ಯಾರಿಗೂ ಸಾಧ್ಯವಿಲ್ಲ. -

ಶಾಮನೂರು ಶಿವಶಂಕರಪ್ಪ, ಶಾಸಕ
  ಲಿಂಗಾಯತರು ಒಗ್ಗೂಡಿದರೆ ವೀರಶೈವರ ಗತಿಯೇನು?

---------------------

ಪಾಕಿಸ್ತಾನಕ್ಕಿಂತ ಈ ನಾನು ಭಾರತದ ಬಗ್ಗೆ ಹೆಚ್ಚು ಆತಂಕಗೊಂಡಿದ್ದೇನೆ.

- ಇಮ್ರಾನ್ ಖಾನ್, ಪಾಕ್ ಪ್ರಧಾನಿ
ಪಾಕಿಸ್ತಾನಕ್ಕಾಗಿ ಆತಂಕ ಪಡುವುದಕ್ಕೆ ಟ್ರಂಪ್ ಇದ್ದಾರೆ ಎಂಬ ಧೈರ್ಯವೇ?

---------------------
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ನನಗೇನೂ ಲಾಭ ಆಗಿಲ್ಲ

- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಅವರು ಮಾಜಿ ಮುಖ್ಯಮಂತ್ರಿ ಆದದ್ದು ನಿಮಗೆ ಲಾಭವಾಯಿತಲ್ಲವೇ?

---------------------

ರಾಜಕೀಯ ಎಂಬುದು ಸೋಡಾ ಗ್ಯಾಸ್ ಇದ್ದಂತೆ.

- ಸಿ.ಟಿ. ರವಿ, ಸಚಿವ
ಒಟ್ಟಿನಲ್ಲಿ ತಮಗೆ ಗ್ಯಾಸ್ ಟ್ರಬಲ್ ಸಮಸ್ಯೆ ಇದೆ ಎಂದಾಯಿತು.

---------------------

ಹಿಂದೂಗಳಿಗೆ ಭಾರತವೊಂದು ಬಿಟ್ಟು ಬೇರೆ ನೆಲ ಎಲ್ಲಿದೆ.

- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಆರ್ಯನ್ನರಿಗೆ ಮಧ್ಯ ಏಶ್ಯ ಇದೆ. ಬಂದಲ್ಲಿಗೆ ಹೊರಟರಾಯಿತು.

---------------------

ಮಹಾರಾಷ್ಟ್ರ ವಿಧಾನ ಸಭೆಗೆ ಕ್ಷೇತ್ರಗಳ ಸೀಟು ಹಂಚಿಕೆ ಭಾರತ - ಪಾಕಿಸ್ತಾನ ವಿಭಜನೆಗಿಂತಲೂ ಕಠಿಣ.

- ಸಂಜಯ್ ರಾವತ್, ಶಿವಸೇನೆ ಮುಖಂಡ
ಅಂದರೆ ದೇಶ ವಿಭಜನೆಯ ಕಾಲದಲ್ಲಾದಂತೆ ಹಿಂಸೆಯಾಗುವ ಸಾಧ್ಯತೆ ಇದೆಯೇ?

---------------------

ನಾನು ಮುಖ್ಯಮಂತ್ರಿ ಆದಾಗಲೆಲ್ಲ ಒಂದಲ್ಲ ಒಂದು ರೀತಿಯ ಅಗ್ನಿ ಪರೀಕ್ಷೆಗೆ ಒಳಗಾಗುತ್ತೇನೆ.

- ಯಡಿಯೂರಪ್ಪ, ಮುಖ್ಯಮಂತ್ರಿ
ಈ ಬಾರಿ ಅಗ್ನಿಕುಂಡದಿಂದ ಹೊರಗೆ ಬರುವುದು ಕಷ್ಟ.

---------------------
ಶಾಸಕನಾಗಿ ಅನರ್ಹಗೊಂಡ ನಾನು ಕಳೆದುಕೊಂಡಿದ್ದೇನೂ ಇಲ್ಲ.

- ಬಿ.ಸಿ. ಪಾಟೀಲ್, ಅನರ್ಹ ಶಾಸಕ
ಹೌದು, ನಿಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಕಳೆದುಕೊಂಡದ್ದು ಮತದಾರರು.

---------------------
ಪ್ರಧಾನಿ ಮೋದಿಯನ್ನು ‘ರಾಷ್ಟ್ರ ಪಿತ’ ಎಂದು ಒಪ್ಪಿಕೊಳ್ಳದವರು ಭಾರತೀಯರೇ ಅಲ್ಲ

- ಜಿತೇಂದ್ರ ಸಿಂಗ್, ಕೇಂದ್ರ ಸಚಿವ
ಈತ ಆರೆಸ್ಸೆಸ್‌ನ ರಾಷ್ಟ ಪಿತ್ಥ

---------------------

ಅನರ್ಹ ಶಾಸಕರು ಬಿಜೆಪಿಯ ಮನೆ ಅಳಿಯರಿದ್ದಂತೆ.

- ಕೆ.ಎಸ್. ಈಶ್ವರಪ್ಪ, ಸಚಿವ
  ಬಿಜೆಪಿಯ ಹೆಣ್ಣು ಮಕ್ಕಳನ್ನೆಲ್ಲ ಅವರಿಗೆ ಧಾರೆಯೆರೆದಿದ್ದೀರಾ?

---------------------

ಎಸೆಸೆಲ್ಸಿ ಮತ್ತು ಪಿಯು ಪರೀಕ್ಷಾ ಮಂಡಲಿಗಳನ್ನು ವಿಲೀನಗೊಳಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.

- ಸುರೇಶ್ ಕುಮಾರ್, ಸಚಿವ
ಅವುಗಳಲ್ಲಿ ನಗದು ಠೇವಣಿ ಸಂಗ್ರಹವೇನಾದರೂ ಇದ್ದಿದ್ದರೆ ಇಷ್ಟರಲ್ಲೇ ವಿಲೀನವಾಗಿ ಬಿಡುತ್ತಿತ್ತು.

---------------------

ಮುಂದಿನ 10 ವರ್ಷಗಳಲ್ಲಿ ಸಚಿವ ಶ್ರೀರಾಮುಲುರನ್ನು ಮುಖ್ಯಮಂತ್ರಿಯನ್ನಾಗಿಸುವ ಯೋಜನೆ ಹಾಕಿಕೊಂಡಿದ್ದೇನೆ.

- ಅನಿಲ್ ಲಾಡ್, ಮಾಜಿ ಶಾಸಕ.
ಯಡಿಯೂರಪ್ಪ ಅವರನ್ನು ಮುಖ್ಯ ಮಂತ್ರಿಯಾಗದಂತೆ ತಡೆಯಲು ಹೊಸ ಯೋಜನೆಯೇ 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...