ಪಾಕ್‌ಗಾಗಿ ಟರ್ಕಿಯಿಂದ ಯುದ್ಧ ನೌಕೆ ನಿರ್ಮಾಣ: ಎರ್ದೊಗಾನ್

Update: 2019-10-01 15:40 GMT

ಅಂಕಾರ, ಅ. 1: ಪಾಕಿಸ್ತಾನದ ನೌಕಾಪಡೆಗಾಗಿ ತನ್ನ ದೇಶವು ಯುದ್ಧನೌಕೆಯೊಂದರ ನಿರ್ಮಾಣವನ್ನು ಆರಂಭಿಸಿದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ್ದಾರೆ.

ರವಿವಾರ ನಡೆದ ಟರ್ಕಿಯ ನೂತನ ಯುದ್ಧನೌಕೆಯೊಂದರ ಉದ್ಘಾಟನೆ ಸಮಾರಂಭದಲ್ಲಿ ಎರ್ದೊಗಾನ್ ಈ ಘೋಷಣೆಯನ್ನು ಮಾಡಿದರು ಎಂದು ಟರ್ಕಿಯ ಸರಕಾರಿ ಒಡೆತನದ ಸುದ್ದಿ ಸಂಸ್ಥೆ ಅನಡೊಲು ವರದಿ ಮಾಡಿದೆ.

ಯುದ್ಧನೌಕೆಗಳನ್ನು ನಿರ್ಮಿಸುವ, ವಿನ್ಯಾಸಗೊಳಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಜಗತ್ತಿನ 10 ದೇಶಗಳ ಪೈಕಿ ಟರ್ಕಿಯೂ ಒಂದು ಎಂದು ಹೇಳಿದ ಅವರು, ಟರ್ಕಿ ನಿರ್ಮಿಸುತ್ತಿರುವ ಯುದ್ಧನೌಕೆಯ ಪ್ರಯೋಜನವನ್ನು ಪಾಕಿಸ್ತಾನ ಪಡೆಯುವುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

 ನಾಲ್ಕು ‘ಮಿಲ್ಗೆಮ್’ ದರ್ಜೆಯ ನೌಕೆಗಳಿಗಾಗಿ ಪಾಕಿಸ್ತಾನ ನೌಕಾ ಪಡೆಯು 2018 ಜುಲೈಯಲ್ಲಿ ಟರ್ಕಿಯೊಂದಿಗೆ ಕರಾರು ಮಾಡಿಕೊಂಡಿತ್ತು ಎಂದು ಅನಡೊಲು ತಿಳಿಸಿದೆ. ಈ ಯುದ್ಧನೌಕೆಗಳನ್ನು ರಾಡಾರ್‌ನಿಂದ ತಪ್ಪಿಸಬಹುದು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News