ಕೇಂದ್ರದಿಂದ ರಾಜ್ಯಕ್ಕೆ 1,200 ಕೋಟಿ ರೂ. ಮಧ್ಯಂತರ ಪರಿಹಾರ ಘೋಷಣೆ
Update: 2019-10-04 21:01 IST
ಹೊಸದಿಲ್ಲಿ, ಅ.4: ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಪರಿಹಾರವಾಗಿ ಕೇಂದ್ರ ಸರಕಾರ 1,200 ಕೋಟಿ ರೂ. ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಿದೆ.
ರಾಜ್ಯದಿಂದ 3800 ಕೋಟಿ ಪರಿಹಾರ ಕೇಳಲಾಗಿತ್ತು. ಆದರೆ ಕೇಂದ್ರ ಗೃಹ ಇಲಾಖೆ ಮೊದಲ ಹಂತದಲ್ಲಿ 1200 ಕೋಟಿ ರೂ. ಹಾಗೂ ಬಿಹಾರಕ್ಕೆ 400 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.
ನೆರೆ ಪರಿಹಾರ ದೊರಕದ ಹಿನ್ನೆಲೆ ಕೇಂದ್ರ-ರಾಜ್ಯ ಸರಕಾರ, ಕೇಂದ್ರ ಸಚಿವರು ಹಾಗೂ ರಾಜ್ಯದ ಬಿಜೆಪಿ ಸಂಸದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿಯ ಕೆಲ ನಾಯಕರೇ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು.