ಮೈಸೂರು ದಸರಾ ಜಂಬೂ ಸವಾರಿಗೆ ಉಗ್ರರ ಭೀತಿ ಇಲ್ಲ: ಸಚಿವ ವಿ.ಸೋಮಣ್ಣ

Update: 2019-10-06 16:11 GMT

ಮೈಸೂರು,ಅ.6: ಮೈಸೂರು ದಸರಾ ಜಂಬೂ ಸವಾರಿಗೆ ಉಗ್ರರ ಭೀತಿ ಇಲ್ಲ ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದರು.

ಮೈಸೂರು ದಸರಾದಲ್ಲಿ ಬಾಂಬ್ ಸ್ಪೋಟಿಸಲು ಬಂದಿದ್ದ ಮೂವರು ಉಗ್ರರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹರಡಿದ ಹಿನ್ನಲೆಯಲ್ಲಿ ರವಿವಾರ ನಗರ ಪೊಲೀಸ್ ಅಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂತಹ ಯಾವುದೇ ಘಟನೆ ನಡೆದಿಲ್ಲ. ಇದೆಲ್ಲಾ ಊಹಾಪೋಹ. ಅದಕ್ಕೆ ಯಾರು ತಲೆಕೆಡಿಸಿಕೊಳ್ಳದೆ ಜಂಬೂಸವಾರಿಯಲ್ಲಿ ಭಾಗವಹಿಸಿ ಎಂದು ಮನವಿದ ಮಾಡಿದರು.

ನಮ್ಮ ರಾಜ್ಯದ ಪೊಲೀಸರು ಸಮರ್ಥರಿದ್ದು ಅಂತಹ ಯಾವುದೆ ಘಟನೆ ನಡೆಯಲು ಬಿಡುವುದಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ತಾಯಿ ಚಾಮುಂಡೇಶ್ವರಿ ಎಲ್ಲವನ್ನು ಕಾಪಾಡುತ್ತಾರೆ. ಹಾಗಾಗಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಬಿ.ಪಿ.ಶುಗರ್ ಬಂದಿದೆ: ದಸರಾ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಬಹಳ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದೆ. ಆದರೆ ಮೊನ್ನೆ ಚಂದನ್ ಶೆಟ್ಟಿ ಯುವ ದಸರಾದಲ್ಲಿ ತನ್ನ ಗೆಳತಿ ನಿವೇದಿತಾ ಗೌಡರಿಗೆ ಪ್ರೊಪೋಸ್ ಮಾಡಿದ ಮೇಲೆ ನನಗೆ ತಲೆ ಕೆಟ್ಟುಹೋಯಿತು. ನನಗೆ ಯಾವುದೆ ಕಾಯಿಲೆ ಇರಲಿಲ್ಲ. ಈ ವಿಚಾರವಾಗಿ ನನಗೆ ಬಿ.ಪಿ, ಶುಗರ್ ಬಂತು. ಈಗ ನಿನ್ನೆಯಿಂದ ಉಗ್ರರ ಭೀತಿ ಎಂಬ ಸುದ್ದಿ ಕೇಳಿ ಮತ್ತಷ್ಟು ಜಾಸ್ತಿಯಾಗಿದೆ ಎಂದು ಹೇಳಿದರು.

ಜನತೆ ಮುಖ್ಯ: ದಸರಾ ಪಾಸ್ ವಿಚಾರದಲ್ಲಿ ಮೇಯರ್ ಸೇರಿದಂತೆ ನಗರಪಾಲಿಕೆ ಸದಸ್ಯರು ಪ್ರತಿಭಟನೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೇಯರ್, ನಗರಪಾಲಿಕೆ ಸದಸ್ಯರು, ಎಂ.ಎಲ್.ಎ, ಮಂತ್ರಿ ನನಗೆ ಮುಖ್ಯ ಅಲ್ಲ ಸಾರ್ವಜನಿರು ಮುಖ್ಯ ಹಾಗಾಗಿ ಪಾಸ್ ವಿಚಾರದಲ್ಲಿ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News