ಭಾರತಕ್ಕೆ ರಫೇಲ್ ಬಲ

Update: 2019-10-08 18:10 GMT

ಭಾರತೀಯ ವಾಯುಪಡೆಯ ಇತಿಹಾಸದಲ್ಲೇ ಹೊಸ ಮೈಲುಗಲ್ಲೆನ್ನಬಹುದಾದ ರಫೇಲ್ ಫೈಟರ್ ಜೆಟ್‌ವಿಮಾನಗಳ ಪೈಕಿ ಮೊದಲನೆಯದ್ದನ್ನ್ನು ಭಾರತವು ಮಂಗಳವಾರ ಫ್ರಾನ್ಸ್‌ನಲ್ಲಿ ವಿಧ್ಯುಕ್ತವಾಗಿ ಸ್ವೀಕರಿಸಿತು. ರಫೇಲ್ ಯುದ್ಧ ವಿಮಾನದ ತಯಾರಕ ಕಂಪೆನಿ ಡಸ್ಸಾಲ್ಟ್ ಏವಿಯೇಶನ್‌ನ ಬೊರ್ಡೆಯುಕ್ಸ್‌ನಲ್ಲಿರುವ ಘಟಕದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧ ವಿಮಾನವನ್ನು ಸ್ವೀಕರಿಸಿದರು. ಅದಕ್ಕೂ ಮುನ್ನ ಅವರು ರಫೇಲ್ ಜೆಟ್‌ಗೆ ಆಯುಧಪೂಜೆ ನೆರವೇರಿಸಿದರು. ಆ ಬಳಿಕ ರಿಬ್ಬನ್ ಕತ್ತರಿಸುವ ಮೂಲಕ ರಫೇಲ್ ಯುದ್ಧ ವಿಮಾನವನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. ಡಸಾಲ್ಟ್ ಏವಿಯೇಶನ್ ಸಂಸ್ಥೆಯು ಒಟ್ಟು 36 ಫೈಟರ್ ಜೆಟ್‌ಗಳನ್ನು ಭಾರತಕ್ಕೆ ನೀಡಲಿದ್ದು, ಇದು ಮೊದಲನೇ ವಿಮಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor