ಶಿವಮೊಗ್ಗ: ವಿದ್ಯುತ್ ತಗುಲಿ ವೃದ್ದ ಸಾವು

Update: 2019-10-08 18:29 GMT

ಶಿವಮೊಗ್ಗ, ಅ. 8: ವಿದ್ಯುತ್ ಶಾಕ್ ತಗುಲಿ ವೃದ್ದರೋರ್ವರು ಮೃತಪಟ್ಟ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಅಗ್ರಹಾರ ಮುಚ್ಚಡಿ ಗ್ರಾಮದಲ್ಲಿ ನಡೆದಿದೆ. 

ಮಲ್ಲೇಶಪ್ಪ ಹಾಲಪ್ಪ ಮಜ್ಜಿಗೇರ (62) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಗ್ರಾಮಕ್ಕೆ ಕುಡಿಯುವ ನೀರು ಹರಿಸುವ ಪಂಪ್‍ಸೆಟ್‍ನ ಮೋಟಾರ್ ಸ್ವಿಚ್ ಹಾಕಲು ಹೋದ ವೇಳೆ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News