ಗುಂಡ್ಲುಪೇಟೆ : ನರಭಕ್ಷಕ ಹುಲಿ ಹಿಡಿಯಲು ಬಂಡೀಪುರ ಅರಣ್ಯ ಇಲಾಖೆಯ ಕಾರ್ಯತಂತ್ರ

Update: 2019-10-09 08:25 GMT

ಗುಂಡ್ಲುಪೇಟೆ : ಹುಂಡೀಪುರ, ಚೌಡಹಳ್ಳಿ ಹಾಗೂ ಗೋಪಾಲ ಸ್ವಾಮಿ ಬೆಟ್ಟ ವಲಯ  ವ್ಯಾಪ್ತಿಯಲ್ಲಿ ನರಭಕ್ಷಕ ಹುಲಿ ರೈತರ ಮೇಲೆ ದಾಳಿ ಮಾಡಿ ಅವರ ಪ್ರಾಣಕ್ಕೆ ಕುತ್ತು ತಂದಿದ್ದರ ಹಿನ್ನೆಲೆ ಆನೆಗಳು ಮತ್ತು ಶಾರ್ಟ್ ಡಾಟರ್ಗಳ ಪಡೆಗಳನ್ನು ಸಿದ್ದತೆ ಮಾಡಿಕೊಂಡಿದೆ. ಕೆಬ್ಬೇಪುರ, ಮಕ್ಕಳ ಮಲ್ಲಪ್ಪ ದೇವಸ್ಥಾನ ಹಾಗೂ ಹುಂಡೀಪುರಗಳಲ್ಲಿ ಕೂಂಬಿಂಗ್ ನಡೆಸಲಾಗುತ್ತದೆ.

ಹುಂಡೀಪುರ ಅರಣ್ಯ ವಲಯದಲ್ಲಿ ಬಿಢಾರಗಳನ್ನು ಹೂಡಿಕೊಂಡಿದ್ದು ವೈಲ್ಡ್ ಲೈಫ್ ನ ಡಾ. ಪ್ರಯಾಗ್, ಡಾ. ವಸೀಂ, ಡಾ. ಅಝ್ಗರ್, ಡಾ. ಮುಜೀಬ್, ಡಾ‌. ಶಫಾತ್ ಅಲೀಖಾನ್, ಡಾ.ವಿನಯ್ ಸೇರಿದಂತೆ ಎಸಿಎಫ್ ರವಿಕುಮಾರ್, ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಇದ್ದಾರೆ.

ನಮ್ಮ ಮುಖ್ಯ ಉದ್ದೇಶ ಹುಲಿಯನ್ನು ಸೆರೆ ಹಿಡಿಯುವುದು ಇದಕ್ಕೆ ಸಂಬಂಧಿಸಿದಂತೆ ಐದು ಗುಂಪುಗಳನ್ನು ಮಾಡಿದ್ದು ಪ್ರತೀ ಗುಂಪಲ್ಲಿ ನಾಲ್ಕು ಜನ ಸಿಬ್ಬಂದಿಗಳಿರುತ್ತಾರೆ. ಹುಲಿ ಕಂಡರೆ ಅದಕ್ಕೆ ಮತ್ತು‌ ಬರುವ ಔಷಧವನ್ನು ನೀಡಲಾಗುವುದು ಅಕಸ್ಮಾತ್ ನಮ್ಮ‌ ಸಿಬ್ಬಂದಿಗಳ‌ ಮೇಲೆ ಧಾಳಿ ಮಾಡಿದ್ದೇ ಆದಲ್ಲಿ ಅದನ್ನು ಶೂಟ್ ಮಾಡಲಾಗುವುದೆಂದು ಸಿಎಫ್ ಬಾಲಚಂದರ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ನಿನ್ನೆ ನರಭಕ್ಷಕ ಹುಲಿ ಬಾಯಿಗೆ ಸಿಲುಕಿ ಮೃತಪಟ್ಟ ಶಿವಲಿಂಗಪ್ಪನ ಮನೆಗೆ ಸಿಎಫ್ ಬಾಲಚಂದರ್ ಭೇಟಿ ನೀಡಿದ್ದ ವೇಳೆ ಗ್ರಾಮಸ್ಥರು ಮತ್ತು ಅವರ ಮನೆಯವರು ಬಾಲಚಂದರ್ ರಿಗೆ ಘೇರಾವ್ ಹಾಕಿದ್ದರು. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಹೇಳಿ ಮನೆಗೆ ಆಧಾರಸ್ತಂಭವಾಗಿದ್ದ ಶಿವಲಿಂಗಪ್ಪನವರ ಮನೆಯವರಿಗೆ ಸರ್ಕಾರಿ ಕೆಲಸ ಕೊಡಿಸುವುದರೊಂದಿಗೆ ಶೀಘ್ರವಾಗಿ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News