ಹಾಂಕಾಂಗ್: ಪ್ರತಿಭಟನಕಾರರು ಬಳಸುತ್ತಿದ್ದ ಆ್ಯಪ್‌ಗೆ ಖೊಕ್

Update: 2019-10-10 17:59 GMT

ಸಾನ್‌ಫ್ರಾನ್ಸಿಸ್ಕೊ, ಅ. 10: ಪೊಲೀಸರ ಚಲನವಲನಗಳನ್ನು ತಿಳಿಯಲು ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವಪರ ಪ್ರತಿಭಟನಕಾರರು ಬಳಸುತ್ತಿದ್ದ ಆ್ಯಪೊಂದನ್ನು ಆ್ಯಪಲ್ ಇಂಕ್ ಬುಧವಾರ ತೆಗೆದುಹಾಕಿದೆ. ಈ ಆ್ಯಪನ್ನು ಕ್ರಿಮಿನಲ್‌ಗಳು ಪೊಲೀಸರ ಮೇಲೆ ದಾಳಿ ನಡೆಸಲು ಹಾಗೂ ಪೊಲೀಸರಿಲ್ಲದ ಸ್ಥಳಗಳಲ್ಲಿ ಜನರನ್ನು ಬಲಿಪಶು ಮಾಡಲು ಬಳಸುತ್ತಿದ್ದಾರೆ ಎಂದು ಅದು ತನ್ನ ಈ ಕ್ರಮಕ್ಕೆ ವಿವರಣೆ ನೀಡಿದೆ.

 ‘ಎಚ್‌ಕೆಮ್ಯಾಪ್.ಲೈವ್’ ಆ್ಯಪನ್ನು ಈ ತಿಂಗಳ ಆದಿ ಭಾಗದಲ್ಲಿ ಆ್ಯಪಲ್ ತಿರಸ್ಕರಿಸಿತ್ತು. ಆದರೆ, ಕಳೆದ ವಾರ ತನ್ನ ನಿಲುವನ್ನು ಬದಲಿಸಿ ಆ್ಯಪ್‌ಗೆ ತನ್ನ ಆ್ಯಪ್ ಸ್ಟೋರ್‌ನಲ್ಲಿ ಅವಕಾಶ ನೀಡಿದೆ.

ಇದನ್ನು ಚೀನಾದ ಕಮ್ಯುನಿಸ್ಟ್ ಪಕ್ಷದ ಅಧಿಕೃತ ಪತ್ರಿಕೆ ‘ಪೀಪಲ್ಸ್ ಡೇಲಿ’ ಮಂಗಳವಾರ ತೀವ್ರವಾಗಿ ಖಂಡಿಸಿದೆ. ಇಂಥ ‘ವಿಷಕಾರಿ’ ಆ್ಯಪ್‌ಗೆ ಅವಕಾಶ ನೀಡಿರುವುದಕ್ಕೆ ಅದು ಆ್ಯಪಲ್ ವಿರುದ್ಧ ಕೆಂಡಗಾರಿದೆ.

ಒತ್ತಡಕ್ಕೆ ಮಣಿದ ಆ್ಯಪಲ್ ಈ ಆ್ಯಪನ್ನು ತನ್ನ ಆ್ಯಪ್ ಸ್ಟೋರ್‌ನಿಂದ ತೆಗೆದುಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News