ಮೂರನೇ ದಿನವೂ ಕಾಣಿಸದ ನರಭಕ್ಷಕ ಹುಲಿ: ಅರಣ್ಯಾಧಿಕಾರಿಗಳಿಗೆ ತಲೆ ಬಿಸಿ
Update: 2019-10-11 22:59 IST
ಚಾಮರಾಜನಗರ, ಅ.11: ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದ ಚೌಡಳ್ಳಿ ಗ್ರಾಮದ ಇಬ್ಬರು ರೈತರನ್ನು ಬಲಿ ಪಡೆದಿರುವ ನರಭಕ್ಷಕ ಹುಲಿ ಸೆರೆಗೆ ಕಳೆದ ಮೂರು ದಿನದಿಂದ 6 ಆನೆ 150 ಕ್ಕೂ ಹೆಚ್ಚು ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದು, ನರಭಕ್ಷಕ ಹುಲಿ ಮಾತ್ರ ಇದುವರೆಗೆ ಕಣ್ಣಿಗೆ ಬಿದ್ದಿಲ್ಲ.
ನರಭಕ್ಷಕ ಹುಲಿ ಸೆರೆಗಾಗಿ 6 ಆನೆಗಳ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಹುಂಡೀಪುರ ಸಮೀಪದ ಮಕ್ಕಳಮಲ್ಲಪ್ಪ ದೇವಸ್ಥಾನದ ಗುಡ್ಡದ ಬಳಿ ಹುಲಿ ಚಲನವಲನ ಪತ್ತೆಯಾಗಿದ್ದರೂ ಹುಲಿ ಸೆರೆಯಾಗಿಲ್ಲ. ಇತ್ತ ಎನ್.ಜಿ.ಓಗಳು ಹುಲಿಯನ್ನು ಕೊಲ್ಲಬೇಡಿ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.