×
Ad

ಉಮೇಶ ಕತ್ತಿಯೂ ಡಿಸಿಎಂ ಆಗಬಹುದು: ಲಕ್ಷ್ಮಣ ಸವದಿ

Update: 2019-10-13 23:30 IST

ಬೆಳಗಾವಿ, ಅ.13: ಯಾರಿಗೆ ಯಾವಾಗ ಅವಕಾಶ ಒಲಿಯುತ್ತದೆಯೋ ತಿಳಿಯದು. ಆದರೆ, ಹಣೆಯಲ್ಲಿ ಬರೆದಿದ್ದರೆ ಮುಂದೊಂದು ದಿನ ಶಾಸಕ ಉಮೇಶ ಕತ್ತಿಯೂ ಉಪ ಮುಖ್ಯಮಂತ್ರಿಯಾಗಬಹುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಾಗ ಕತ್ತಿ ಬೇರೆ ಕೆಲಸದಲ್ಲಿದ್ದರು. ಹೀಗಾಗಿ ಭೇಟಿಯಾಗಿಲ್ಲ. ಅವರೇನು ನಮ್ಮ ವೈರಿಯೇ? ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದರು.

ಮಾಜಿ ಸಚಿವ ಡಾ.ಜಿ.ಪರಮೇಶ್ವರ್ ಆಪ್ತಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ರಾಜಕೀಯ ಥಳಕು ಹಾಕಬಾರದು. ಈ ಹಿಂದೆ ಬಿಜೆಪಿ ನಾಯಕರ ಮೇಲೂ ಐಟಿ (ಆದಾಯ ತೆರಿಗೆ) ದಾಳಿ ನಡೆದಿವೆ. ತನಿಖಾ ಸಂಸ್ಥೆಗಳು, ಸಂಶಯ ಬರುವವರ ಮೇಲೆ ದಾಳಿ ನಡೆಸುತ್ತವೆ. ರಮೇಶ ಆತ್ಮಹತ್ಯೆಗೂ ಐಟಿ ದಾಳಿಗೂ ಸಂಬಂಧವೇ ಇಲ್ಲ. ಸಮಗ್ರ ತನಿಖೆ ನಂತರ ಸತ್ಯ ಹೊರಬರಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News