ಬ್ಯಾಂಕ್ ವ್ಯವಹಾರ ಕನ್ನಡದಲ್ಲೇ ಇರಲಿ: ಸಂಸದೆ ಸುಮಲತಾ

Update: 2019-10-16 17:04 GMT

ಮಂಡ್ಯ, ಅ.16: ಬ್ಯಾಂಕಿನಲ್ಲಿ ನಡೆಯುವ ಪ್ರತಿಯೊಂದು ವ್ಯವಹಾರಗಳು ಕನ್ನಡ ಮತ್ತು ಇಂಗ್ಗೀಷ್ ಭಾಷೆಯಿಂದ ಕೂಡಿರಬೇಕು. ಜನರಿಗೆ ಮುಟ್ಟಿಸುವ ಯಾವುದೇ ಅರಿವು ಕಾರ್ಯಕ್ರಮಗಳು ಕನ್ನಡದಲ್ಲೇ ನಡೆಯಬೇಕು ಎಂದು ಸಂಸದೆ ಸುಮಲತಾ ಅಂಬರೀಷ್ ಸೂಚಿಸಿದ್ದಾರೆ.

ಬ್ಯಾಂಕ್ ಆಫ್ ಬರೋಡ ಪ್ರಾದೇಶಿಕ ಕಚೇರಿ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಬರೋಡ ರೈತರ ದಿನಾಚರಣೆ ಹಾಗು ಕೃಷಿ ಪಾಕ್ಷಿಕ-ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನುವಾರುಗಳ ತಪಾಸಣೆ, ಆರೋಗ್ಯ ತಪಾಸಣೆ ಬೀದಿ ನಾಟಕ ಹಾಗೂ ಸ್ವ-ಸಹಾಯ ಸಂಘಗಳ ಮೂಲಕ ಜನರಲ್ಲಿ ಅರಿವು ಮೂಡಿಸುವುದು ಒಂದು ರೀತಿಯ ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮಗಳಿಂದ ರೈತರ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ವೈಜ್ಞಾನಿಕವಾಗಿ ರೈತರು ಸಾಲ ಪಡೆದು ಆರ್ಥಿಕ ಮುಗ್ಗಟ್ಟಿನಿಂದ ಹೊರಬರಬಹುದು ಎಂಬುದನ್ನು ಬ್ಯಾಂಕ್‍ಗಳು ತಿಳಿಸಿಕೊಟ್ಟಿವೆ ಎಂದರು.

ಜಿಪಂ ಸಿಇಒ ಕೆ.ಯಾಲಕ್ಕಿಗೌಡ, ಬ್ಯಾಂಕ್ ಆಫ್ ಬರೋಡದ ಪ್ರಧಾನ ವ್ಯವಸ್ಥಾಪಕ ಎಸ್.ಎ. ಸುದರ್ಶನ್, ಬ್ಯಾಂಕ್ ಮೈಸುರು ಪ್ರಾದೇಶಿಕ ವ್ಯವಸ್ಥಾಪಕ ಕೆ.ಸತ್ಯನಾರಾಯಣ ನಾಯಕ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News