ಎಚ್.ವಿಶ್ವನಾಥ್- ಸಾ.ರಾ.ಮಹೇಶ್ ನಡುವಿನ ವಾಕ್ಸಮರದ ಬಗ್ಗೆ ಸಚಿವ ಸಿ.ಟಿ.ರವಿ ಹೇಳಿದ್ದು ಹೀಗೆ...

Update: 2019-10-16 17:53 GMT

ಮೈಸೂರು,ಅ.16: ಪರಸ್ಪರ ಕೆಸರೆರಚಾಟ ಮಾಡಿಕೊಳ್ಳುವುದು ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಗೌರವ ತರುವಂಥದ್ದಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

ಮೈಸೂರಿಗೆ ಭೇಟಿ ನೀಡಿದ ಸಂದರ್ಭ ಶಾಸಕ ಸಾ.ರಾ.ಮಹೇಶ್ ಮತ್ತು ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರ ಆಣೆ, ಪ್ರಮಾಣ ಕುರಿತ ಮಾದ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ ಆರೋಪ ಮಾಡುವವರು ಮಿತಿಯಲ್ಲಿರಬೇಕು. ಅದನ್ನು ಕೆಲವೊಮ್ಮೆ ಕೇಳಿಯೂ ಕೇಳದಂತೆ ಇದ್ದು ಬಿಡಬೇಕು.  ಅದಕ್ಕೆ ಆಕ್ಷನ್-ರಿಯಾಕ್ಷನ್ ಎರಡೂ ಒಳ್ಳೆಯದಲ್ಲ. ರಾಜಕೀಯ ಕ್ಷೇತ್ರದಲ್ಲಿರುವವರ ಗೌರವ ಕಡಿಮೆ ಮಾಡತ್ತೆ. ಇಬ್ಬರೂ ಪ್ರಬುದ್ಧರಿದ್ದಾರೆ. ಬಹಳ ವರ್ಷ ದೀರ್ಘ ಕಾಲ ಸಾರ್ವಜನಿಕ ಕ್ಷೇತ್ರದಲ್ಲಿ ಕಳೆದವರಿದ್ದಾರೆ. ಅವರಿಗೆ ನಾವು ಹೇಳಬೇಕಾಗಿರುವುದೇನು ಇಲ್ಲ ಎಂದರು.

ಪ್ರತ್ಯೇಕ ಜಿಲ್ಲೆ ರಚನೆ ಕುರಿತು, ಪ್ರತಿಕ್ರಿಯಿಸಿ ಅದು ಸಂಪುಟದಲ್ಲಿ ತೆಗೆದುಕೊಳ್ಳಬೇಕಾದ ತೀರ್ಮಾನ. ನಾನು ವರದಿಗಳನ್ನು ಮಾಧ್ಯಮದಲ್ಲಿ ನೋಡಿದ್ದೆ. ಬಹಳಷ್ಟು ಜಿಲ್ಲೆಗಳಿಗೆ ಬೇಡಿಕೆ ಇದೆ. ಬೇಡಿಕೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ,ಸಚಿವ ಸಂಪುಟ ಜಿಲ್ಲೆಯ ರಚನೆಗೆ ಸಂಬಂಧಪಟ್ಟಂತೆ ಇರುವ ಸಾಧಕ ಬಾಧಕಗಳನ್ನು ವರದಿಯೊಂದಿಗೆ ತೆಗೆದುಕೊಂಡು ನಿರ್ಣಯ ತೆಗೆದುಕೊಳ್ಳುತ್ತೆ ಎಂದರು.

ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರನ್ನು ಭೇಟಿಯಾಗಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ರಾಜಕಾರಣದಲ್ಲಿ ಮುಚ್ಚಿಡುವಂಥದ್ದೇನಿಲ್ಲ. ನಾನು ಭೇಟಿ ಮಾಡಿಲ್ಲ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News