ಪ್ರಾಥಮಿಕ ಶಾಲೆಯ ಪಠ್ಯ ಪುಸ್ತಕ ಓದಿ: 32 ಜಿಲ್ಲೆಗಳು ಎಂದ ನಳಿನ್‌ ಕುಮಾರ್ ಕಟೀಲ್ ಗೆ ಕಾಂಗ್ರೆಸ್ ಪ್ರಶ್ನೆ

Update: 2019-10-17 12:50 GMT

ಬೆಂಗಳೂರು,ಅ. 17: ‘ನಳಿನ್‌ ಕುಮಾರ್ ಕಟೀಲ್ ಅವರೇ, ಕರ್ನಾಟಕ ರಾಜ್ಯದಲ್ಲಿ 32 ಜಿಲ್ಲೆಗಳಾ?’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಇಂದಿಲ್ಲಿ ಪ್ರಶ್ನಿಸಿದೆ.

‘ಕರ್ನಾಟಕ ರಾಜ್ಯದಲ್ಲೆಷ್ಟು ಜಿಲ್ಲೆಗಳಿವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ನೀವು ರಾಜ್ಯವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವಿರಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವಿರಿ, ಪ್ರಾಥಮಿಕ ಶಾಲೆಯ ಪಠ್ಯ ಪುಸ್ತಕವನ್ನು ಒಮ್ಮೆ ಕೊಂಡು ಓದಿ, ಕನಿಷ್ಠವಾದರೂ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಿರಿ ಎಂದು ಕಾಂಗ್ರೆಸ್ ಟ್ವಿಟ್ಟರ್ ಮೂಲಕ ಲೇವಡಿ ಮಾಡಿದೆ.

‘ಪಕ್ಷ ಎಂದರೆ ನಕಲಿ ಗಾಂಧಿ ಪರಿವಾರ, ಸಂಘಟನೆ ಎಂದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರುಗಳ ಆರಾಧನೆ ಹಾಗೂ ದೆಹಲಿಗೆ ಹೋಗುವುದೇ ಸಂಘಟನಾತ್ಮಕ ಪ್ರವಾಸ ಎಂದು ತಿಳಿದಿರುವ ಕಾಂಗ್ರೆಸ್ ಅಧ್ಯಕ್ಷರಿಗೆ ಬಿಜೆಪಿಯ 36 ಸಂಘಟನಾತ್ಮಕ ಜಿಲ್ಲೆಗಳ ವಿಚಾರ ಹೇಗೆ ಅರ್ಥವಾದೀತು? ಅಪಪ್ರಚಾರ ಮಾಡುವುದನ್ನು ಬಿಟ್ಟು ಪಕ್ಷದ ಸಂಘಟನೆ ಕಡೆ ಗಮನ ಹರಿಸಲಿ’
-ಬಿಜೆಪಿ ಟ್ವೀಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News