×
Ad

20 ವರ್ಷಗಳ ಹೋರಾಟಕ್ಕೆ ಸಂದ ಫಲ: ಹರಪನಹಳ್ಳಿಗೆ ಬಂದ ಹೊಸಪೇಟೆ ರೈಲು

Update: 2019-10-17 23:54 IST

  ಹರಪನಹಳ್ಳಿ, ಅ.17: ಹೊಸಪೇಟೆ-ಕೊಟ್ಟೂರು-ಹರಪನಹಳ್ಳಿ-ಹರಿಹರ ರೈಲಿಗೆ ಕೇಂದ್ರದ ರಾಜ್ಯ ರೈಲ್ವೆ ಖಾತೆಯ ಸಚಿವ ಸುರೇಶ ಸಿ. ಅಂಗಡಿ ಗುರುವಾರ ಮಧ್ಯಾಹ್ನ 12:45ಕ್ಕೆ ಹೊಸಪೇಟೆಯಲ್ಲಿ ಚಾಲನೆ ನೀಡಿದ್ದಾರೆ.

ಹರಪನಹಳ್ಳಿಗೆ 3:30 ಕ್ಕೆ ಆಗಮಿಸಿದ ರೈಲಿನಲ್ಲಿ ರಾಜ್ಯ ರೈಲ್ವೆ ಸಚಿವ ಸುರೇಶ ಸಿ. ಅಂಗಡಿ, ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ, ಬಳ್ಳಾರಿ ಸಂಸದ ದೇವೇಂದ್ರಪ್ಪ ವೈ. ಹರಪನಹಳ್ಳಿ ಬಿಜೆಪಿ ಮುಖಂಡ ಎಂ.ಪಿ. ನಾಯ್ಕ, ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್ ಪುರಸಭಾ ಸದಸ್ಯ ಸಣ್ಣ ಹಾಲಪ್ಪ, ಮಾಬೂಸಾಬ್, ರಾಘವೇಂದ್ರ ಶೆಟ್ಟಿ, ಬಾಗಳಿಕೊಟ್ರೇಶ್ ಇದ್ದರು.

 ಇದೇ ಸಂದರ್ಭದಲ್ಲಿ ಇದ್ಲಿ ರಾಮಪ್ಪ ಮಂಗಳೂರು ಹಾಗೂ ವಿಶಾಖಪಟ್ಟಣ ಬಂದರುಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ಮುಂಬೈಯಿಂದ ಬಿಜಾಪುರ ಮಾರ್ಗವಾಗಿ ಬೆಂಗಳೂರು ಮತ್ತು ಮೈಸೂರಿಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕು. ಈ ಮಾರ್ಗವಾಗಿ ದಿನ ನಿತ್ಯ ಪ್ರಯಾಣಿಕರ ರೈಲು ಸಂಚಾರ ವಿಸ್ತರಿಸಬೇಕು ಎಂದು ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News