ಪರೀಕ್ಷೆಯಲ್ಲಿ ನಕಲು ತಪ್ಪಿಸಲು ವಿದ್ಯಾರ್ಥಿಗಳು ತಲೆಗೆ ರಟ್ಟಿನ ಪೆಟ್ಟಿಗೆ ಧರಿಸಲು ಸೂಚಿಸಿದ ಕಾಲೇಜು !

Update: 2019-10-18 18:17 GMT

ಬೆಂಗಳೂರು,ಅ.18: ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಪ್ಪಿಸಲು ವಿದ್ಯಾರ್ಥಿಗಳು ತಲೆಗೆ ರಟ್ಟಿನ ಪೆಟ್ಟಿಗೆಗಳನ್ನು ಧರಿಸುವಂತೆ ಸೂಚಿಸಿದ ಘಟನೆ ರಾಜ್ಯದ ಖಾಸಗಿ ಕಾಲೇಜೊಂದರಲ್ಲಿ ನಡೆದಿದ್ದು ಇದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ಮೂಲಕ ಕಾಲೇಜಿಗೆ ಸಮಸ್ಯೆ ತಂದೊಡ್ಡಿದೆ. 

ಹಾವೇರಿ ಜಿಲ್ಲೆಯ ಭಗತ್ ಪದವಿಪೂರ್ವ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಕಾಲೇಜು ವ್ಯವಸ್ಥಾಪನಾ ಮಂಡಳಿಯ ಸದಸ್ಯ ಸತೀಶ್ ಹೇರೂರ್ ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಫೇಸ್ಬುಕ್ ನಲ್ಲಿ ಹಾಕಿದ್ದರು. ಇದು ನಮ್ಮ ಕಾಲೇಜಿನಲ್ಲಿ ಇಂದು ನಡೆದ ಮಧ್ಯಾವಧಿ ಪರೀಕ್ಷೆಯ ದೃಶ್ಯ. ಇದು ಭಗತ್ ಪಿಯು ಕಾಲೇಜು, ಹಾವೇರಿ ಎಂದು ಅಡಿಬರಹ ಹಾಕಿದ್ದರು. ಘಟನೆ ಬೆಳಕಿಗೆ ಬಂದ ಕೂಡಲೇ ಕಾರ್ಯಪ್ರವೃತ್ತವಾದ ರಾಜ್ಯ ಸರಕಾರ, ಕಾಲೇಜಿಗೆ ನೋಟಿಸ್ ಜಾರಿ ಮಾಡಿ ವಿದ್ಯಾರ್ಥಿಗಳು ತಲೆಗೆ ಪೆಟ್ಟಿಗೆ ಧರಿಸುವಂತೆ ಸೂಚಿಸಲು ಕಾರಣವೇನು ಎಂದು ವಿವರಣೆ ನೀಡಲು ಸೂಚಿಸಿದೆ ಎಂದು ಸಾರ್ವಜನಿಕ ಸೂಚನೆಗಳ ಇಲಾಖೆಯ ಉಪನಿರ್ದೇಶಕ ಎಸ್.ಎಸ್ ಪಿರಾಜೆ ತಿಳಿಸಿದ್ದಾರೆ.

ಕಳೆದ ವರ್ಷ ನಡೆದ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ನಕಲು ಮಾಡಿ ವಂಚಿಸಿದ್ದು ನಿರಂತರ ಎಚ್ಚರಿಕೆಗಳ ನಂತರವೂ ಅವರು ತಮ್ಮ ಚಟವನ್ನು ಮುಂದುವರಿಸಿದ್ದರು. ಇದರಿಂದ ರೋಸಿಹೋದ ಕಾಲೇಜು ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಕಾಲೇಜು ಮಂಡಳಿಯ ಓರ್ವ ಸದಸ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News