'ವಾರ್ತಾಭಾರತಿ' ವರದಿಗಾರ ಶ್ರೀನಿವಾಸ ಮೂರ್ತಿಗೆ ಶ್ರೀ ಶಿವಾರತ್ರೀಶ್ವರ ಪ್ರಶಸ್ತಿ ಪ್ರದಾನ

Update: 2019-10-19 16:01 GMT

ಮೈಸೂರು,ಅ.19: ಜೆಎಸ್‍ಎಸ್ ಸಂಸ್ಥೆ ನೀಡುವ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿಯನ್ನು ಈ ಬಾರಿ ನಂಜನಗೂಡು ತಾಲೂಕು 'ವಾರ್ತಾಭಾರತಿ' ದಿನಪತ್ರಿಕೆ ವರದಿಗಾರ ಶ್ರೀನಿವಾಸಮೂರ್ತಿ ಅವರಿಗೆ ನೀಡಿ ಗೌರವಿಸಲಾಯಿತು.

ನಗರದ ಶ್ರಾವಣ ಕಲ್ಯಾಣ ಮಂಟದಲ್ಲಿ ಶನಿವಾರ ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಪತ್ರಕರ್ತ ಶ್ರೀನಿವಾಸ ಮೂರ್ತಿ ಅವರಿಗೆ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ 10 ಸಾವಿರ ರೂ. ನಗದು ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಫಲತಾಂಬೂಲ ನೀಡಿ ಶಾಸಕ ಹರ್ಷವರ್ಧನ್ ಸನ್ಮಾನಿಸಿದರು. ನಂತರ ಮಾತನಾಡಿದ ಶಾಸಕ ಹರ್ಷವರ್ಧನ್, ಮಾಧ್ಯಮಗಳು ತಮ್ಮ ವೈಯಕ್ತಿಕ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರ ಮೇಲೆ ಹೇರುವ ಬದಲಾಗಿ ನೈಜ ಹಾಗೂ ವಾಸ್ತವ ಸಂಗತಿಗಳನ್ನು ಎತ್ತಿ ಹಿಡಿಯುವ ಮೂಲಕ ಮಾಧ್ಯಮದ ವಿಶ್ವಾಸಾರ್ಹತೆ ಕಾಯ್ದುಕೊಳ್ಳಬೇಕಿದೆ ಎಂದು ಹೇಳಿದರು.

ದೃಶ್ಯ ಮಾಧ್ಯಮಗಳು ಟಿಆರ್‍ಪಿ ಲೆಕ್ಕಾಚಾರದಲ್ಲಿ ಬ್ರೇಕಿಂಗ್ ಸುದ್ದಿಯ ಬೆನ್ನತ್ತುವ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ಕೆಲ ದಿನಗಳ ಹಿಂದೆ ರಾಜ್ಯ ರಾಜಕೀಯದಲ್ಲುಂಟಾದ ರಾಜಕೀಯ ಅಸ್ಥಿರತೆ ವೇಳೆ ಶಾಸಕರು ರೆಸಾರ್ಟ್ ವಾಸ್ತವ್ಯ ಹೂಡಿದ್ದ ಸಂದರ್ಭ ದೃಶ್ಯ ಮಧ್ಯಮಗಳಲ್ಲಿ ರೋಚಕ ಸುದ್ದಿಗಳು ಪ್ರಕಟಗೊಂಡವು. ವಾಸ್ತವವಾಗಿ ರೆಸಾರ್ಟ್ ವಾಸ್ತವ್ಯ ನಮಗೆಲ್ಲರಿಗೂ ಬೇಸರ ತಂದಿದೆ. ರೆಸಾರ್ಟ್ ವಾಸ್ತವ್ಯದ ವೇಳೆ ಮಧ್ಯಮಗಳಲ್ಲಿ ಮೋಜು ಮಸ್ತಿ ಎಂಬ ವರದಿಗಳು ಪ್ರಕಟಗೊಂಡವು. ಆದರೆ ವಾಸ್ತವ ಸತ್ಯ ಬೇರೆಯಿದೆ ಎಂದರು.

ಜೆಎಸ್‍ಎಸ್ ಮಹಾವಿದ್ಯಾಪೀಠ ಪ್ರಕಟಣೆ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಸಮಾಜವನ್ನು ಎಚ್ಚರಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವ ಪತ್ರಕರ್ತರು ವಿದ್ಯಾರ್ಥಿಗಳನ್ನು ತಯಾರು ಮಾಡುವ ಅಧ್ಯಾಪಕರಂತೆಯೇ ಕೆಲಸ ನಿರ್ವಹಿಸುತ್ತಾರೆ. ಸಮಾಜ ಕಟ್ಟುವಲ್ಲಿ ಅಹರ್ನಿಶಿ ದುಡಿಯುತ್ತಿರುವ ಮಾಧ್ಯಮ ವರ್ಗದ ಮಂದಿಯನ್ನು ಗುರ್ತಿಸಿ ಅಗತ್ಯ ಪ್ರೋತ್ಸಾಹ ನೀಡುವ  ಸಲುವಾಗಿ ಜೆಎಸ್‍ಎಸ್  ಮಹಾವಿದ್ಯಾಪೀಠದಿಂದ ಪ್ರತಿ ವರ್ಷ ದತ್ತಿ ಪ್ರಶಸ್ತಿ ನೀಡಲಾಗುತ್ತಿದ್ದು ಆ ಮೂಲಕ ವೃತ್ತಿಜೀವನದಲ್ಲಿ ಸಾರ್ಥಕ ಸೇವೆ ಸಲ್ಲಿಸಿದ  ಪತ್ರಕರ್ತರನ್ನು ಗೌರವಿಸಿ ಕ್ರಿಯಾಶೀಲತೆ ಹೆಚ್ಚಾಗಲು ನೆರವಾಗಿದ್ದೇವೆ ಎಂದು ಹೇಳಿದರು.

ಸಮಾರಂಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ತಾಲೂಕು ಪತ್ರಕರ್ತರ ಸಂಘದ ಅದ್ಯಕ್ಷ ಹುಲ್ಲಹಳ್ಳಿ ಮೋಹನ್, ಮೈಸೂರು ನಗರ ಉಪಾಧ್ಯಕ್ಷ ಎಂ.ಸುಬ್ರಹ್ಮಣ್ಯ, ಕಾರ್ಯದರ್ಶಿ ಬಿ.ರಾಘವೇಂದ್ರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಆರ್ ಸತ್ಯನಾರಾಯಣ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್, ಉಪಾಧ್ಯಕ್ಷ ಮಹದೇವಪ್ರಸಾದ್, ಕಾರ್ಯದರ್ಶಿ ಪ್ರತಾಪ್ ಕೋಡಿನರಸೀಪುರ, ನಗರ ಕಾರ್ಯದರ್ಶಿ ಸಿ.ರಾಘವೇಂದ್ರ, ನಿರ್ದೇಶಕರಾದ ಜಯಶಂಕರ್ ಬದನಗುಪ್ಪೆ, ಮಲ್ಲಿಗೆ ಮಾಚಮ್ಮ, ಶೇಖರ್ ಕಿರುಗುಂದ, ನಂಜನಗೂಡು ಮಧು, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಕೆಂಪೇಗೌಡ, ಹುಲ್ಲಹಳ್ಳಿ ಶ್ರೀನಿವಾಸ್, ಎಂ.ಪ್ರಕಾಶ್, ಎಸ್.ಗಂಗಾಧರ್, ಹುಲ್ಲಹಳ್ಳಿ ಚಿನ್ನಸ್ವಾಮಿ, ಎಸ್.ಮಹದೇವು, ಎಚ್,ಡಿ ರಂಗಸ್ವಾಮಿ, ಸದಸ್ಯರುಗಳಾದ ಕೆ.ರವಿಶಂಕರ್, ಎಂ.ಎಸ್ ಸತ್ಯನಾರಾಯಣ, ಸಿ.ಎಂ ಬಸವರಾಜು, ಎಸ್ ಚಂದ್ರಶೇಖರ್, ಮಹದೇವಸ್ವಾಮಿ, ಹೆಡಿಯಾಲ ಮಹದೇವಸ್ವಾಮಿ, ಭಾಗ್ಯರಾಜ್, ಜಿ.ಎಂ ವೇಣುಗೋಪಾಲ್, ಸುತ್ತೂರು ನಂಜುಂಡನಾಯಕ, ತಾಂಡವಪುರ ಬಸವರಾಜು, ಹುರಾ ಕೃಷ್ಣಪ್ಪಗೌಡ,  ನಗರಸಭಾ ಸದಸ್ಯರಾದ ಮಹದೇವಸ್ವಾಮಿ, ಮೀನಾಕ್ಷಿ ನಾಗರಾಜು, ವಿಜಯಕುಮಾರ್, ವಕೀಲರ ಸಂಘದ ಅದ್ಯಕ್ಷ ಎಸ್.ಗಿರಿರಾಜ್, ಹಿರಿಯ ವಕೀಲ ಗೋಳೂರು ಎನ್.ಉಮೇಶ್, ಕಾಂಗ್ರೆಸ್‍ನ ಒಬಿಸಿ ಅಧ್ಯಕ್ಷ ಜೆ.ನಾಗರಾಜು, ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್, ಕಾರ್ಯದರ್ಶಿ ಇಮ್ಮಾವು ರಘು, ಸಿಂಧುವಳ್ಳಿ ರಾವ್, ನಾಗರಾಜು, ಹಾಡ್ಯ ರವಿ, ದಸಂಸ ಮುಖಂಡರಾದ ನಾರಾಯಣ್, ಮಲ್ಲೇಶ್, ಮಂಜುನಾಥ್, ನಾಗೇಂದ್ರ, ಯೋಗೇಶ್, ಕವಲಂದೆ ಮಹದೇವ, ತಾಲೂಕು ರೈತ ಸಂಘದ ಅದ್ಯಕ್ಷ ಬೊಕ್ಕಹಳ್ಳಿ ನಂಜುಂಡಸ್ವಾಮಿ, ನಗರ ಬಿಜೆಪಿ ಅಧ್ಯಕ್ಷ ಬಾಲಚಂದ್ರ, ಗ್ರಾಮಾಂತರ ಅಧ್ಯಕ್ಷ ಕೆಂಡಗಣ್ಣಪ್ಪ, ಉದ್ಯಮಿಗಳಾದ ಬಾಲು, ಗೋವರ್ಧನ್, ಶಿಕ್ಷಕ ಮ.ಗು.ಬಸವಣ್ಣ, ಮಹಿಳಾ ಅದ್ಯಕ್ಷೆ ನಂದಿನಿ ಮಹೇಶ್, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾದಿಕಾರಿಗಳು ಭಾಗವಹಿಸಿದ್ದರು. 

ಸಂಗಿತ ಶಿಕ್ಷಕ ರವಿರಾಜ್ ಪ್ರಾರ್ಥನೆಗೈದರು. ಪಿ. ಮಹದೇವಪ್ರಸಾದ್ ಸ್ವಾಗತಿಸಿ, ಹುಲ್ಲಹಳ್ಳಿ ಶ್ರೀನಿವಾಸ್ ವಂದಿಸಿದರು. ನಂಜನಗೂಡು ಮಧು ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News