ಮಾಜಿ ಸಚಿವ ರಾಮದಾಸ್ ಪ್ರೇಮ ಪ್ರಕರಣ: ಬಿ ರಿಪೋರ್ಟ್ ರದ್ದುಗೊಳಿಸಿ, ಸಮನ್ಸ್ ಜಾರಿಗೊಳಿಸಿದ ಕೋರ್ಟ್

Update: 2019-10-21 14:29 GMT

ಬೆಂಗಳೂರು, ಅ.21: ಮಾಜಿ ಸಚಿವ ಎಸ್.ಎ.ರಾಮದಾಸ್ ಮತ್ತು ಪ್ರೇಮಕುಮಾರಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ರದ್ದುಗೊಳಿಸಿರುವ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ರಾಮದಾಸ್ ವಿರುದ್ಧ ಸಮನ್ಸ್ ಜಾರಿಗೊಳಿಸಿ ಆದೇಶಿಸಿದೆ.

ಪ್ರೇಮಕುಮಾರಿಗೆ ದಾಮದಾಸ್ ಮೋಸ ಮಾಡಿಲ್ಲವೆಂದು ಅಭಿಪ್ರಾಯಿಸಿ ಪೊಲೀಸರು ಪ್ರಕರಣಕ್ಕೆ ಬಿ ರಿಪೋಟ್ ಸಲ್ಲಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಪ್ರೇಮಕುಮಾರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಪೀಠವು ವಕೀಲರ ವಾದ ಆಲಿಸಿ ಬಿ ರಿಪೋರ್ಟ್ ಅನ್ನು ತಿರಸ್ಕರಿಸಿ ರಾಮದಾಸ್‌ಗೆ ಸಮನ್ಸ್ ಜಾರಿಗೊಳಿಸಿದೆ.

'ಮಾಜಿ ಸಚಿವ ರಾಮದಾಸ್ ನನ್ನನ್ನು ಪ್ರೀತಿಸುವ ನಾಟಕವಾಡಿ ದೈಹಿಕವಾಗಿ ಬಳಸಿಕೊಂಡರು. ಮದುವೆಯಾಗುವುದಾಗಿ ನಂಬಿಸಿ ಹಣೆಗೆ ಕುಂಕುಮ ಇಟ್ಟಿದ್ದರು. ಮದುವೆ ವಿಚಾರವನ್ನು ಪ್ರಸ್ತಾಪಿಸಿದಾಗ ಕೊಲೆ ಬೆದರಿಕೆಯೊಡ್ಡಿದ್ದರು' ಎಂದು ಪ್ರೇಮಕುಮಾರಿ ಅರ್ಜಿಯಲ್ಲಿ ದೂರಿದ್ದರು. ಈ ಸಂಬಂಧ ಪ್ರೇಮಕುಮಾರಿ, ರಾಮದಾಸ್ ವಿರುದ್ಧ ಸ್ವರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News