ಮಂಡ್ಯ: ಪ್ರಮಾಣಪತ್ರ ನೀಡಲು ವಿಳಂಬ ಖಂಡಿಸಿ ಏಕಾಂಗಿ ಧರಣಿ, ಆತ್ಮಹತ್ಯೆ ಎಚ್ಚರಿಕೆ

Update: 2019-10-21 18:06 GMT

ಮಂಡ್ಯ, ಅ.21: ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಲಾಗಿದೆ ಎಂದು ಆರೋಪಿಸಿ ವಿಕಲಚೇತನ ಯಾಕೂಬ್ ಮದ್ದೂರು ತಾಲೂಕು ಕಚೇರಿ ಎದುರು ಸೋಮವಾರ ಏಕಾಂಗಿ ಧರಣಿ ನಡೆಸಿದರು.

ತನ್ನ ತಂಗಿ ಸೀಮಾಳ ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಕೋರಿ ಅರ್ಜಿ ಹಾಕಿ 25 ದಿನಗಳಾಗಿದೆ. ಅಲೆಸುತ್ತಿದ್ದಾರೆಯೇ ಹೊರತು ಪ್ರಮಾಣಪತ್ರ ಕೊಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಚೇರಿ ಅಧಿಕಾರಿ, ಸಿಬ್ಬಂದಿ ಲಂಚ ಕೊಡದೆ ಯಾವುದೇ ಕೆಲಸ ಮಾಡಿಕೊಡುವುದಿಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದ ಯಾಕೂಬ್, ಪ್ರಮಾಣಪತ್ರ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದರು.

ಸ್ಥಳಕ್ಕೆ ಆಗಮಿಸಿದ ಶಿರಸ್ತೆದಾರ್ ರಾಜು ಇನ್ನು 2 ಗಂಟೆಯೊಳಗೆ ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೊಡಿಸುವುದಾಗಿ ಭರವಸೆ ನೀಡಿದ ನಂತರ ಧರಣಿ ಹಿಂಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News