ಭಾರೀ ಮಳೆ: ಸಾಗರ ತಾಲೂಕಿನ ಶಾಲೆಗಳಿಗೆ ಅ.26ರಂದು ರಜೆ ಘೋಷಣೆ
Update: 2019-10-25 19:42 IST
ಶಿವಮೊಗ್ಗ, ಅ.25: ಸಾಗರ ತಾಲೂಕಿನಲ್ಲಿ ಕಳೆದೆರೆಡು ದಿನಗಳಿಂದ ಬೀಸುತ್ತಿರುವ ಗಾಳಿ ಹಾಗೂ ಭಾರೀ ಮಳೆಯ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಅ. 26ರಂದು (ಶನಿವಾರ) ಸಾಗರ ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿ.ಇ.ಓ.) ಗಳು ತಿಳಿಸಿದ್ದಾರೆ.