ಕರ್ನಾಟಕ ಕ್ರಿಕೆಟ್ ತಂಡಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಅಭಿನಂದನೆ
Update: 2019-10-25 21:43 IST
ಬೆಂಗಳೂರು, ಅ.25: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಪೈನಲ್ ಪಂದ್ಯದಲ್ಲಿ 4ನೇ ಬಾರಿ ಕರ್ನಾಟಕ ಕ್ರಿಕೆಟ್ ತಂಡವು ವಿಜಯ ಸಾಧಿಸಿದೆ. ತಮಿಳುನಾಡು ತಂಡದ ವಿರುದ್ಧ ರೋಚಕ ಬೌಲಿಂಗ್ ಪ್ರದರ್ಶನ ತೋರಿಸಿದ ಅಭಿಮನ್ಯು ಮಿಥುನ್ ಹಾಗೂ ಸಮಗ್ರ ತಂಡಕ್ಕೆ ಯುವಜನ ಸಬಲೀಕರಣ, ಕ್ರೀಡಾ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.