ಬೆಳಗಾವಿ-ಬೆಂಗಳೂರು ತತ್ಕಾಲ್ ರೈಲಿಗೆ ಹೆಚ್ಚುವರಿ ಕೋಚ್ ಗಳ ಜೋಡಣೆ
Update: 2019-10-26 23:27 IST
ಬೆಂಗಳೂರು, ಅ.26: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿರ್ದೇಶನದಂತೆ ರೈಲು ಸಂಖ್ಯೆ 06525/06526 ಬೆಳಗಾವಿ-ಬೆಂಗಳೂರು ತತ್ಕಾಲ್ ಸೂಪರ್ ಫಾಸ್ಟ್ ವಿಶೇಷ ರೈಲಿಗೆ ಹೆಚ್ಚುವರಿಯಾಗಿ ತಲಾ ಒಂದು 3 ಎಸಿ ಮತ್ತು ಸ್ಲೀಪರ್ ಹೆಚ್ಚುವರಿ ಕೋಚುಗಳ ಜೋಡಣೆಯಾಗಲಿದೆ.
ಬೆಂಗಳೂರಿನಿಂದ ಬೆಳಗಾವಿಗೆ ಹೊರಡುವ ಹೊರಡುವ ರೈಲುಗಾಡಿಗೆ ಅ.30ರವರೆಗೆ ಹೆಚ್ಚುವರಿ ಕೋಚುಗಳು ಅಳವಡಿಸಲಾಗುತ್ತಿದ್ದು, ಬೆಳಗಾವಿಯಿಂದ ಬೆಂಗಳೂರಿಗೆ ಹೊರಡುವ ಗಾಡಿಗೆ ಅ.27ರಿಂದ 31ರವರೆಗೆ ಹೆಚ್ಚುವರಿ ಡಬ್ಬಿಗಳು ಅಳವಡಿಸಲು ಅನುಮೋದನೆ ದೊರೆತಿದೆ.
ಇದರಿಂದ ದೀಪಾವಳಿ ಹಬ್ಬಕ್ಕೆ ಪ್ರಯಾಣಿಸುವ ರೈಲುಯಾತ್ರಿಗಳಿಗೆ ಅನುಕೂಲವಾಗಲಿದ್ದು, ಇದರ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಗೊಳಿಸಿಕೊಳ್ಳಬೇಕೆಂದು ಸುರೇಶ ಅಂಗಡಿ ಪ್ರಕಟನೆಯಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.