×
Ad

ಮಡಿಕೇರಿಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ: ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

Update: 2019-11-01 16:52 IST

ಮಡಿಕೇರಿ ನ.1 : ಮಡಿಕೇರಿಯಲ್ಲಿ ನಡೆದ ಸಂಭ್ರಮದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ 2018-19ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ಸ್ಕೌಟ್ ಮತ್ತು ಗೈಡ್ಸ್‍ನಲ್ಲಿ ಸಾಧನೆ ಮಾಡಿದ ಸ್ವಯಂಸೇವಕರನ್ನು, ಸ್ಕೌಟ್ಸ್ ಮತ್ತು ಗೈಡ್ಸ್‍ನ ಅತ್ಯುತ್ತಮ ಶಿಕ್ಷಕರಾದ ಚಂದ್ರಶೇಖರ್, ಉಷಾರಾಣಿ ಹಾಗೂ ನಳಿನಾಕ್ಷಿ ಅವರನ್ನು ಗೌರವಿಸಲಾಯಿತು. ಅಲ್ಲದೆ ರಾಜ್ಯೋತ್ಸವದ ಅಂಗವಾಗಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸಮಾರಂಭದ ಬಳಿಕ ನಗರದ ಸಂತ ಮೈಕೆಲರ ಶಾಲೆ, ಜನರಲ್ ತಿಮ್ಮಯ ಪಬ್ಲಿಕ್ ಶಾಲೆ, ಬ್ಲಾಸಂ ಶಾಲೆ ಹಾಗೂ ಕ್ರೆಸೆಂಟ್ ಶಾಲೆಯ  ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. 

ಪಥ ಸಂಚಲನದಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸೇವಾದಳದ ವಿದ್ಯಾರ್ಥಿಗಳು (ಪ್ರಥಮ), ಸಂತ ಮೈಕೆಲೆ ಶಾಲೆಯ ಗೈಡ್ಸ್ (ದ್ವಿತೀಯ)  ಹಾಗೂ ಸಂತ ಜೋಸೆಫರ ಶಾಲೆಯ ಗೈಡ್ಸ್ ತಂಡ (ತೃತೀಯ) ಬಹುಮಾನ ಪಡೆದರೆ, ತೋಟಗಾರಿಕಾ ಇಲಾಖೆ, ಮಡಿಕೇರಿ ತಾ.ಪಂ., ಹಾಗೂ  ಅರಣ್ಯ ಇಲಾಖೆ ಸ್ತಬ್ಧಚಿತ್ರಗಳು ಕ್ರಮವಾಗಿ ಮೊದಲ ಮೂರು  ಬಹುಮಾನಗಳನ್ನು ಪಡೆದವು.

ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ರಾಜಾಸೀಟ್ ಬಳಿಯಿಂದ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು. ಕನ್ನಡ ಸಂಸ್ಕøತಿ ಇಲಾಖೆಯ ವಿವಿಧ ಕಲಾತಂಡಗಳೂ ಭಾಗವಹಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News