'ನಾನೇ ಟಿಪ್ಪು' ಎಂದಿದ್ದ ಬಿಎಸ್‌ವೈ ಈಗ ಟಿಪ್ಪುವನ್ನು ಮತಾಂಧನೆಂದು ಹೇಳುತ್ತಿದ್ದಾರೆ: ಸಿದ್ದರಾಮಯ್ಯ
Update: 2019-11-01 21:18 IST
ಬೆಂಗಳೂರು, ನ.1: ಟಿಪ್ಪು ಸುಲ್ತಾನ್ ಕುರಿತು ಲೇಖಕ ಡಾ.ಬಿ.ಶೇಖ್ ಅಲಿ ಬರೆದಿರುವ ಪುಸ್ತಕದಲ್ಲಿ ಜಗದೀಶ್ ಶೆಟ್ಟರ್, ಟಿಪ್ಪುವಿನ ಆಳ್ವಿಕೆಯನ್ನು ಕೊಂಡಾಡಿದ್ದಾರೆ. ಹಾಗೆಯೇ ಗೋವಿಂದ ಕಾರಜೋಳ ಟಿಪ್ಪುವಿನ ಪರಾಕ್ರಮಗಳನ್ನು ಬಣ್ಣಿಸಿದ್ದಾರೆ. ಹಾಗೆಯೇ 2013ರಲ್ಲಿ ನಾನೇ ಟಿಪ್ಪು ಎಂದಿದ್ದ ಯಡಿಯೂರಪ್ಪ ಈಗ ಟಿಪ್ಪುವನ್ನು ಮತಾಂಧನೆಂದು ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಆರ್.ಅಶೋಕ್ ಟಿಪ್ಪು ಪೇಟ ಹಾಕಿಕೊಂಡು ಮಿಂಚಿದ್ದಾರೆ. ಬಿಜೆಪಿ ನಾಯಕರು ಇಷ್ಟೆಲ್ಲಾ ಮಾಡಿರುವುದು ನಮ್ಮ ಕಣ್ಣ ಮುಂದೆ ಇದ್ದರೂ ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಟಿಪ್ಪುವನ್ನು ವಿರೋಧಿಸುವುದು ಇಬ್ಬಂದಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.