ವಿಕಲಚೇತನರನ್ನು ಸಮಾಜ ನೋಡುವ ದೃಷ್ಟಿ ಕೋನ ಬದಲಾಗಬೇಕಿ: ಕೆ.ವಿ ರಾಜಣ್ಣ

Update: 2019-11-04 17:59 GMT

ಹನೂರು, ನ.4: ವಿಕಲಚೇತನರ ಬಗ್ಗೆ ನಮ್ಮ ಸಮಾಜ ನೋಡುವ ದೃಷ್ಟಿ ಕೋನ ಬದಲಾಗಬೇಕಿದೆ ಎಂದು ಮಾರ್ಗದರ್ಶಿ ಸಂಸ್ಥೆಯ ಜಿಲ್ಲಾದ್ಯಕ್ಷ ಕೆ.ವಿ ರಾಜಣ್ಣ ತಿಳಿಸಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಾರ್ಗದರ್ಶಿ ಸಂಸ್ಥೆಯಿಂದ ವಿಕಲಚೇತನರಿಗೆ ಅವಶ್ಯಕತೆ ಇರುವ ವಿವಿಧ ಸಲಕರಣೆಗಳು ಸೇರಿದಂತೆ ವೀಲ್ ಚೇರ್‌ನ್ನು ಉಚಿತವಾಗಿ ನೀಡಲಾಯಿತು. ಈ ವೇಳೆ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ವಿಕಲಚೇತನರನ್ನು ನೋಡುವ ದಾಟಿಯೇ ಬದಲಾಗಿ ಹೋಗಿದೆ. ಅವರನ್ನು ಪ್ರೀತಿಯಿಂದ ನೋಡುವ ಬದಲು ಹೀಯಾಳಿಸಿ ನೋಡುವ ಮನೋಭಾವ ಹೆಚ್ಚಾಗಿದ್ದು, ಈ ಪ್ರವೃತ್ತಿ ಬದಲಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಈ ದಿಸೆಯಲ್ಲಿ ವಿಕಲಚೇತನರಿಗೆ ನಮ್ಮ ಕರುಣೆ ಅನುಕಂಪ ಬೇಡ, ನಮ್ಮಂತಯೇ ಅವರು ಸಮಾನರು ಎಂದು ಕಾಣುವಂತಹ ಪ್ರವೃತ್ತಿಯನ್ನು ನಮ್ಮ ಜನರು ಬೆಳೆಸಿಕೂಳ್ಳಬೇಕಿದೆ ಎಂದರು.

ಸರಕಾರವು ವಿಕಲಚೇತನರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೂಳಿಸಿದ್ದು, ಅವರಿಗೆ ಅವಶ್ಯಕತೆಗೆ ತಕ್ಕಂತೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು ಅವರಿಗೆ ಸೂಕ್ತ ಮಾರ್ಗದರ್ಶನ ಅಗತ್ಯತೆ ಇದ್ದು, ನಮ್ಮ ಸುತ್ತ ಮುತ್ತಲಿನ ವಿಕಲಚೇತನರನ್ನು ಗುರುತಿಸಿ ಅವರಿಗೊಂದು ಬದುಕು ಕಟ್ಟಿಕೊಡುವ ಕೆಲಸವನ್ನು ಮಾರ್ಗದರ್ಶಿ ವಿಕಲಚೇತನ ಸೇವಾ ಸಂಸ್ಥೆಯಿಂದ ಮಾಡಿಕೂಂಡು ಬರಲಾಗುತ್ತಿದೆ ಎಂದರು. 

ಇದೇ ಸಂದರ್ಭದಲ್ಲಿ ಬಿಐಇಆರ್‌ಟಿ ಕೃಷ್ಣ, ಮಾರ್ಗದರ್ಶಿ ಸಂಸ್ಥೆಯ ಹಿರಿಯ ಕಾರ್ಯಕಕರ್ತರಾದ ಗೀತಾ, ವಿಕಲಚೇತನರ ಹಾರೈಕೆದಾರರ ಸಂಘದ ಅಧ್ಯಕ್ಷ ರಾಜುಗೌಡ ಮೇಲ್ವಿಚಾರಕರಾದ ಕಲ್ಯಾಣಿ, ರೂಪ್ಲನಾಯಕ್, ರಮೇಶ್, ಅಬೀಬಾ, ಶಿವಮೂರ್ತಿ, ಪೀಜಿಯೋಥೇರಾಪಿಸ್ಟ್ ಶ್ರೀನಿವಾಸ್ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News