×
Ad

ಸಿಎಂ ಬಿಎಸ್ ವೈ ಭೇಟಿ ವೇಳೆ ಮೊಬೈಲ್ ಬಳಕೆ ನಿಷೇಧ !

Update: 2019-11-05 10:19 IST

ಬೆಂಗಳೂರು, ನ.5: ಇನ್ನು ಮುಂದೆ ಯಾರೂ ಕೂಡಾ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗುವಾಗ ಮೊಬೈಲ್ ಕೊಂಡೊಯ್ಯುವಂತಿಲ್ಲ. 

ಆಡಿಯೋ ಲೀಕ್ ಆಗಿರುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಈ ನಿರ್ಧಾರ ಕೈಗೊಂಡಿದ್ದಾರೆ.

ಪಕ್ಷದ ಮುಖಂಡರು , ಕಾರ್ಯಕರ್ತರು ಭೇಟಿಯಾಗುವ ವೇಳೆ ಮೊಬೈಲ್ ಫೋನ್ ಬಳಕೆ ಮಾಡುವಂತಿಲ್ಲ. ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಬಿಎಸ್ ವೈ ನಿವಾಸದಲ್ಲಿ ಸಂದರ್ಶಕರಿಗೆ ಮೊಬೈಲ್ ಬಳಕೆ ನಿಷೇಧಿಸಿ ಬೋರ್ಡ್ ಹಾಕಲಾಗಿದೆ.

ತಮ್ಮನ್ನು ಭೇಟಿಯಾಗಲು ಮನೆಗೆ ಬರುವಾಗ ಮೊಬೈಲ್ ತರದಂತೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಪೊಲೀಸರಿಗೂ ಈ ಸಂಬಂಧ ಸೂಚನೆ ನೀಡಲಾಗಿದೆ.

ಇನ್ನು ಮಂದೆ ಮೊಬೈಲ್ ಇಲ್ಲದಿರುವುದು ದೃಢಪಡಿಸಿದ ಬಳಿಕ ಪಕ್ಷದ ಮುಖಂಡರಿಗೆ , ಕಾರ್ಯಾಕರ್ತರಿಗೆ , ಸಾರ್ವಜನಿಕರಿಗೆ ಪೊಲೀಸರು ಸಿಎಂ ಭೇಟಿಗೆ ಅವಕಾಶ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News