ಶಿವಮೊಗ್ಗ ಪ್ರವಾಸದಲ್ಲಿರುವ ಸಿದ್ದರಾಮಯ್ಯ
Update: 2019-11-05 11:51 IST
ಶಿವಮೊಗ್ಗ, ನ.5: ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಖ್ಯಾತ ಪ್ರವಾಸಿ ತಾಣ ಜೋಗಫಾಲ್ಸ್ಗೆ ಮಂಗಳವಾರ ಮುಂಜಾನೆ ಭೇಟಿ ನೀಡಿ ವಾಯುವಿಹಾರ ನಡೆಸಿದರು.
ಬಳಿಕ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪರನ್ನು ಸಾಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದರು.