×
Ad

ನೀತಿಗೆಟ್ಟ ರಾಜಕಾರಣ ಮಾಡಿ ದೇಶದ ಮುಂದೆ ಕಾಂಗ್ರೆಸ್ ಬೆತ್ತಲಾಗಿದೆ: ಬಿಜೆಪಿ ತಿರುಗೇಟು

Update: 2019-11-05 19:30 IST

ಬೆಂಗಳೂರು, ನ.5: ಜನ ವಿರೋಧಿ ಕಾರ್ಯಗಳನ್ನು ಮಾಡಿದ್ದರಿಂದಲೇ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟಿಗೆ ಇಳಿಸಿದ್ದು ಎಂದು ಟ್ವೀಟರ್‌ನಲ್ಲಿ ಬಿಜೆಪಿ ತಿರುಗೇಟು ನೀಡಿದೆ. 

ಅಧಿಕಾರದ ಆಸೆಗಾಗಿ ನೀತಿಗೆಟ್ಟ ರಾಜಕಾರಣ ಮಾಡಿ ದೇಶದ ಮುಂದೆ ಬೆತ್ತಲಾದ ಕಾಂಗ್ರೆಸ್ ನಾಯಕರು ಬಿಜೆಪಿಯ ಬಗ್ಗೆ ಎಷ್ಟೇ ಸುಳ್ಳು ಹೇಳಿದರೂ ಅವರ ಮಾನ ಮುಚ್ಚಿಕೊಳ್ಳಲು ಆಗುವುದಿಲ್ಲ. ಚೀರಾಟ ನಿಲ್ಲಿಸಿ ಜನಸೇವೆ ಮಾಡಿ ಎಂದು ಬಿಜೆಪಿ ತಿಳಿಸಿದೆ.

ಸಿದ್ದರಾಮಯ್ಯನವರೇ 2018ರಲ್ಲಿ ಜನತಾ ದಳದ ಏಳು ಶಾಸಕರು ನಿಮ್ಮ ನಾಯಕತ್ವದ ಅಡಿಯಲ್ಲಿ ಕಾಂಗ್ರೆಸ್ ಸೇರಿದ್ದರು. ಈ ಆಪರೇಷನ್ ಮಾಡಿದ್ದು ಯಾರು ಮತ್ತು ಅದರ ಹೆಸರು ಏನು? ಈ ಆಪರೇಷನ್ ನಡೆಸಲು ಸೋನಿಯಾ ಮತ್ತು ರಾಹುಲ್ ಗಾಂಧಿ ಅನುಮತಿ ನೀಡಿದ್ದರೆ? ಅವರಿಗೆ ಎಷ್ಟು ಹಣ ಸಂದಾಯವಾಗಿತ್ತು? ರಾಜ್ಯದ ಜನತೆಗೆ ಸ್ವಲ್ಪ ತಿಳಿಸುತ್ತೀರಾ? ಎಂದು ಬಿಜೆಪಿ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News