ಧಾರವಾಡ ಕೇಂದ್ರ ಕಾರಾಗೃಹ: ಶಿಕ್ಷಾಬಂಧಿಗಳ ಅವಧಿ ಪೂರ್ವ ಬಿಡುಗಡೆ

Update: 2019-11-05 17:35 GMT

ಧಾರವಾಡ, ನ.5: ಮಹಾತ್ಮಾ ಗಾಂಧೀಜಿಯವರ ಜೀವನ ಚರಿತ್ರೆ ಇಂದಿನ ಕಾಲಘಟ್ಟಕ್ಕೆ ಅತ್ಯಂತ ಪ್ರಸ್ತುತವಾದುದು. ಅವರ ಜೀವನ ಹಾಗೂ ಸ್ವಾತಂತ್ರ್ಯ ಚಳವಳಿ, ಸರಳ ನಡೆನುಡಿ ನಮಗೆಲ್ಲರಿಗೂ ಸ್ಫೂರ್ತಿ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು. 

ಬುಧವಾರ ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಮಹತ್ಮಾ ಗಾಂಧೀಜಿಯವರ 150ನೆ ಜಯಂತಿ ಅಂಗವಾಗಿ ಅಲ್ಪಾವಧಿ ಶಿಕ್ಷಾಬಂಧಿಗಳ ಅವಧಿ ಪೂರ್ವ ಬಿಡುಗಡೆ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗಾಂಧೀಜಿಯವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಅವಧಿಪೂರ್ವ ಬಿಡುಗಡೆಯಾಗುತ್ತಿರುವ ಬಂಧಿಗಳಿಗೆ ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಾಬಂದಿಗೆ ಮಹಾತ್ಮಾ ಗಾಂಧೀಜಿಯವರ ಆತ್ಮಕಥೆಯ ಪುಸ್ತಕ ಹಾಗೂ ಪ್ರಮಾಣ ಪತ್ರ ನೀಡಿ ಬಿಡುಗಡೆಗೊಳಿಸಿದರು. ಕಾರಾಗೃಹದ ಅಧೀಕ್ಷಕಿ ಡಾ.ಅನಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅಧೀಕ್ಷಕಿ ಎಸ್.ಡಿ.ಗಲ್ಲೆ, ಜೈಲರ್‌ಗಳಾದ ದುಂಡಪ್ಪತುರಾದಿ, ಆನಂದ ಭಜಂತ್ರಿ, ಶಿವಾಜಿ ಲಮಾಣಿ, ಡಾ.ಸಿದ್ಧಾಂತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News