ಪಿಎಂಸಿ ಬ್ಯಾಂಕ್‌ನಿಂದ ಹಣ ತೆಗೆಯುವ ಮಿತಿ 50 ಸಾವಿರಕ್ಕೆ ಏರಿಕೆ

Update: 2019-11-05 18:35 GMT

ಮುಂಬೈ, ನ. 3: ಹಗರಣಕ್ಕೆ ಒಳಗಾದ ಪಂಜಾಬ್ ಹಾಗೂ ಮಹಾರಾಷ್ಟ್ರ (ಪಿಎಂಸಿ) ಬ್ಯಾಂಕ್‌ನ ಖಾತೆಯಿಂದ ಹಣ ತೆಗೆಯುವ ಮಿತಿಯನ್ನು ರಿಸರ್ವ್ ಬ್ಯಾಂಕ್ ಮಂಗಳವಾರ 50,000ಕ್ಕೆ ಏರಿಕೆ ಮಾಡಿದೆ.

 ಸೆಪ್ಟಂಬರ್ 23ರಿಂದ ತನ್ನ ನೇರ ನಿಯಂತ್ರಣಕ್ಕೆ ಒಳಪಟ್ಟ ಬಳಿಕ ರಿಸರ್ವ್ ಬ್ಯಾಂಕ್ ಪಿಎಂಸಿ ಬ್ಯಾಂಕ್ ಖಾತೆಯಿಂದ ಹಣ ಹಿಂದೆ ತೆಗೆಯುವ ಮಿತಿಯನ್ನು ಇಂದು ಐದನೇ ಬಾರಿ ಹೆಚ್ಚಿಸಿದೆ.

ಥಾಣೆಯಲ್ಲಿ ಸೋಮವಾರ 74 ವರ್ಷದ ವೃದ್ಧ ಜೀವ ಕಳೆದುಕೊಂಡಿರುವುದು ಸೇರಿದಂತೆ ಇದುವರೆಗೆ ಪಿಎಂಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ 9 ಮಂದಿ ಠೇವಣಿದಾರರು ಜೀವ ಕಳೆದುಕೊಂಡಿದ್ದಾರೆ.

 ಸೂಚಿಸಲಾದ 50 ಸಾವಿರ ಮಿತಿಯಲ್ಲಿ ಬ್ಯಾಂಕ್‌ನ ಎಟಿಎಂನಿಂದ ಹಣ ಹಿಂದೆ ತೆಗೆಯುವ ಅವಕಾಶವನ್ನು ಆರ್‌ಬಿಐ ಖಾತೆದಾರರಿಗೆ ನೀಡಿದೆ.

 ಬ್ಯಾಂಕ್‌ನ ದ್ರವೀಯತೆ ಸ್ಥಿತಿ ಹಾಗೂ ಠೇವಣಿದಾರರಿಗೆ ಪಾವತಿಸುವ ಅದರ ಸಾಮರ್ಥ್ಯ ಪರಿಶೀಲಿಸಿದ ಬಳಿಕ ಖಾತೆದಾರರ ಹಣ ಹಿಂದೆ ತೆಗೆಯುವ ಮಿತಿಯನ್ನು 40 ಸಾವಿರಕ್ಕೆ ಬದಲಾಗಿ 50 ಸಾವಿರಕ್ಕೆ ಏರಿಕೆ ಮಾಡಲು ನಿರ್ಧರಿಸಲಾಯಿತು ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿನಾಯತಿಯಿಂದ ಬ್ಯಾಂಕ್‌ನ ಶೇ. 78 ಠೇವಣಿದಾರರು ತಮ್ಮ ಖಾತೆಯ ಸಂಪೂರ್ಣ ಬಾಕಿ ಹಿಂದೆ ತೆಗೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News