ಕಾಶ್ಮೀರದಲ್ಲಿ ಮಂಜಿನ ಮಳೆ..!

Update: 2019-11-07 18:03 GMT

ಜಮ್ಮು ಮತ್ತು ಕಾಶ್ಮೀರದ ಸೋನ್ಮಾರ್ಗ್ ಮತ್ತು ಗುಲ್ಮಾರ್ಗ್ ಸೇರಿದಂತೆ ಹಲವು ಭಾಗಗಳಲ್ಲಿ ಈ ವರ್ಷದ ಮೊದಲ ಮಂಜಿನ ಮಳೆ (ಹಿಮಪಾತ) ಆರಂಭವಾಗಿದೆ. ಹಿಮಾಲಯ ಶ್ರೇಣಿಯ ಅತ್ಯಂತ ಒಳಭಾಗವಾದ ಪಿರ್ ಪಂಜಲ್ ವಲಯದಲ್ಲಿ ಬೆಳಗ್ಗೆಯಿಂದಲೇ ಭಾರೀ ಹಿಮಪಾತವಾಗುತ್ತಿದ್ದು, ಉಷ್ಣಾಂಶ ಶೂನ್ಯ ಮಟ್ಟಕಿಂತಲೂ ಕೆಳಗೆ ಕುಸಿದಿದೆ. ಭಾರೀ ಹಿಮ ವರ್ಷದಿಂದ ಮುಘಲ್ ರಸ್ತೆ ಬಂದ್ ಆಗಿದ್ದು, ಸಾಲುಗಟ್ಟಿ ನಿಂತ ವಾಹನಗಳು ಮಂಜಿನ ಮುದ್ದೆಗಳಾಂತಾಗಿವೆ. ಉತ್ತರ ಕಾಶ್ಮೀರದ ಗುಲ್ಮಾರ್ಗ್ ಹಾಗೂ ಲಡಖ್ ಪ್ರಾಂತ್ಯದ ಲೆಹ್ ಮತ್ತು ಕಾರ್ಗಿಲ್ ಪಟ್ಟಣಗಳು ನಿನ್ನೆ ರಾತ್ರಿ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿತ್ತು. ಈ ಪ್ರದೇಶಗಳ ಮೇಲೆ ದಟ್ಟ ಮಂಜಿನ ಹೊದಿಕೆ ಆವರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor