ವಾಯು ಮಾಲಿನ್ಯದಲ್ಲಿ ದಿಲ್ಲಿಯನ್ನು ಮೀರಿಸಿದ ಚೆನ್ನೈ

Update: 2019-11-07 18:42 GMT

ಚೆನ್ನೈ, ನ. 7: ಕಳೆದ ಕೆಲವು ದಿನಗಳಿಂದ ವಾಯು ಮಾಲಿನ್ಯದಿಂದ ದಿಲ್ಲಿ ತೀವ್ರ ತೊಂದರೆಗೊಳಗಾಗುತ್ತಿದೆ. ಈಗ ಚೆನ್ನೈ ಸರದಿ. ಚೆನ್ನೈಯಲ್ಲಿ ಗುರುವಾರ ಬೆಳಗ್ಗೆ 9.30ಕ್ಕೆ ವಾಯು ಗುಣಮಟ್ಟ ಸೂಚ್ಯಂಕ 264 ದಾಖಲಾಗಿದೆ. ಇದೇ ಸಂದರ್ಭ ದಿಲ್ಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 254 ಆಗಿತ್ತು.

ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಅತಿ ಕಳಪೆ ವಾಯು ಗುಣಮಟ್ಟ ದಾಖಲಾಗಿದೆ. ವಳಚ್ಚೇರಿ, ರಾಂಪುರಂ, ಮನಾಲಿ, ಕೊಡುಂಗೈವೂರ್, ಅಣ್ಣಾ ನಗರ್, ಚೆನ್ನೈ ವಿಮಾನ ನಿಲ್ದಾಣದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 241 ದಾಖಲಾಗಿದೆ.

ಈ ಅತ್ಯಧಿಕ ವಾಯು ಮಾಲಿನ್ಯ ಮಟ್ಟ ಶುಕ್ರವಾರದ ವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 ವಾಯು ಗುಣಮಟ್ಟದ ಬಗ್ಗೆ ನಿರಂತರ ನಿಗಾ ಇರಿಸಲು ಚೆನ್ನೈಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಾಯು ಗುಣಮಟ್ಟ ನಿಗಾ ಕೇಂದ್ರಗಳಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಚೆನ್ನೈಯಲ್ಲಿ ಪ್ರಕರಣಗಳ ಅಧ್ಯಯನ ನಡೆಸಿದ ಅರ್ಬನ್‌ ಎಮಿಶನ್.ಕಾಂ, ವಾಯು ಗುಣಮಟ್ಟ ಅಳೆಯಲು ನಗರದಲ್ಲಿ ಕನಿಷ್ಠ 38 ವಾಯು ಗುಣಮಟ್ಟ ನಿಗಾ ಕೇಂದ್ರಗಳ ಅಗತ್ಯ ಇದೆ ಎಂದು ಹೇಳಿದೆ.

ವಾಹನ ಸಂಚಾರ, ಕೈಗಾರಿಕೆ ಹಾಗೂ ತೆರೆದ ಪ್ರದೇಶದಲ್ಲಿ ಬೆಳೆ ತ್ಯಾಜ್ಯ ದಹನ ಚೆನ್ನೈಯಲ್ಲಿ ವಾಯು ಮಾಲಿನ್ಯ ಉಂಟಾಗಲು ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News