7ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ತರಾತುರಿ ಬೇಡ: ಎಸ್‌ಐಒ ಒತ್ತಾಯ

Update: 2019-11-08 12:43 GMT

ಬೆಂಗಳೂರು, ನ.8: ಈ ಶೈಕ್ಷಣಿಕ ವರ್ಷದಿಂದಲೇ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಜಾರಿಮಾಡುವ ತರಾತುರಿ ಬೇಡವೆಂದು ಎಸ್‌ಐಒ ವಿದ್ಯಾರ್ಥಿ ಸಂಘಟನೆ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಶಿಕ್ಷಕರ ಗುಣಮಟ್ಟದ ಬೋಧನೆಯ ಕೊರತೆಯಿದೆ. ಮೂಲಭೂತ ಸೌಕರ್ಯದ ಕೊರತೆಯಿದೆ. ಅದಕ್ಕಿಂತ ಮುಖ್ಯವಾಗಿ ಶಿಕ್ಷಣ ನೀತಿಗಳಲ್ಲಿ ಸಾಕಷ್ಟು ವೈಫಲ್ಯತೆಯಿದೆ. ಇದನ್ನೆಲ್ಲಾ ಬದಿಗೊತ್ತಿ ಪಬ್ಲಿಕ್ ಪರೀಕ್ಷೆಯಿಂದ ಗುಣಮಟ್ಟ ಸಾಧಿಸುತ್ತೇವೆಂದು ಸರಕಾರ ಹೊರಟಿರುವುದು, ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡುವ ಕ್ರಮವಾಗಿದೆ.

ಸರಕಾರ ಮೊದಲು ತನ್ನ ಕಡೆಯಿಂದ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸವಲತ್ತುಗಳನ್ನು ಸರಿಯಾಗಿ ನೀಡುವಲ್ಲಿ ಗಮನಹರಿಸಲಿ. ಶಾಲೆಗಳಲ್ಲಿ ಕೊರತೆಯಿರುವ ಶಿಕ್ಷಕರ ನೇಮಕ ಮಾಡಲಿ. ಮೂಲಭೂತ ಸೌಕರ್ಯಗಳನ್ನು ನೀಡಲಿ. ನಂತರ ಪಬ್ಲಿಕ್ ಪರೀಕ್ಷೆ ಕುರಿತು ಮಾತನಾಡಲಿ. ಸರಕಾರದ ತರಾತುರಿಯ ನಿರ್ಣಯದಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಗೊಂದಲಕ್ಕೀಡಾಗಿದ್ದು, ಪರೀಕ್ಷೆಗೆ ಉಳಿದ ಮೂರು ನಾಲ್ಕು ತಿಂಗಳಲ್ಲಿ ಒಂದು ಅವೈಜ್ಞಾನಿಕ ನೀತಿಯೊಂದನ್ನು ಹೇರುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತದೆ. ಆದ್ದರಿಂದ ರಾಜ್ಯ ಸರಕಾರ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ’ ನಿರ್ಣಯ ಕೂಡಲೇ ಕೈ ಬಿಡಬೇಕೆಂದು ಎಸ್‌ಐಒ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News