ಮನವಿ ಸ್ವೀಕರಿಸದ ಡಿಸಿಎಂ: ಪ್ರತಿಭಟಿಸಿದ ದಲಿತ ಮುಖಂಡರ ಬಂಧನ

Update: 2019-11-09 16:43 GMT
ಗೋವಿಂದ ಕಾರಜೋಳ

ಕಲಬುರ್ಗಿ, ನ.9: ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಸಲ್ಲಿಸಿದ ಮನವಿಯನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ವೀಕರಿಸಲಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ದಲಿತ ಮುಖಂಡರನ್ನು ಪೊಲೀಸರು ಬಂಧಿಸಿದರು.

ಶನಿವಾರ ನಗರದ ಅತಿಥಿ ಗೃಹದಲ್ಲಿ ದಲಿತ ಸಂಘಟನೆಯ ಕಾರ್ಯಕರ್ತರು ಮನವಿ ನೀಡಲು ಮುಂದಾದ ವೇಳೆ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮನವಿ ಸ್ವೀಕರಿಸಿಲ್ಲ. ಇದನ್ನು ಖಂಡಿಸಿ, ಕೆಲವರು ಸ್ಥಳದಲ್ಲಿಯೇ ಘೋಷಣೆ ಕೂಗಿ, ಪ್ರತಿಭಟನೆ ನಡೆಸಿದರು ಎನ್ನಲಾಗಿದೆ.

ದಲಿತರ ಸಮಸ್ಯೆಗಳು ಹಾಗೂ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರೂ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಬೇಸರಗೊಂಡ ದಲಿತ ಮುಖಂಡರು ಪ್ರತಿಭಟಿಸಿದಾಗ 12ಕ್ಕೂ ಅಧಿಕ ಮುಖಂಡರನ್ನು ಬಂಧಿಸಿ, ಪೊಲೀಸರು ತಮ್ಮ ವಾಹನದಲ್ಲಿ ಕರೆದುಕೊಂಡು ಹೋದರು ಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ದಶರಥ ಕಲಗುರ್ತಿ ಸುದ್ದಿಗಾರರಿಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News