ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ: 10 ಮಂದಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Update: 2019-11-10 16:16 GMT

ಚಿಕ್ಕಮಗಳೂರು, ನ.10: ನಗರದ ಮಲೆನಾಡು ವಿದ್ಯಾಸಂಸ್ಥೆ ಆವರಣದಲ್ಲಿ ನ.8ರಿಂದ ಆರಂಭವಾದ 2 ದಿನಗಳ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಒಟ್ಟು 10 ಮಂದಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದಲ್ಲಿ ಗೋಗಟೆ ಪ.ಪೂ.ಕಾಲೇಜಿನ ಶ್ರೇಯಸ್ ಎ.ಕುಲಕರ್ಣಿ, ಮೈಸೂರಿನ ಪ್ರೀತಮ್ ಗಂಗಾಧರ್, ಉಡುಪಿಯ ಪಿ.ಪ್ರಜ್ವಲ್, ಮೈಸೂರಿನ ಚೈತನ್ಯ ಗಣೇಶ್ ಮತ್ತು ಬೆಂಗಳೂರು ದಕ್ಷಿಣದ ವಿ.ಎಸ್.ಶ್ರೇಯಸ್ ಹೆಚ್ಚು ಅಂಕ ಗಳಿಸಿ ಆಯ್ಕೆಯಾದರು.

ಬಾಲಕಿಯರ ವಿಭಾಗದಲ್ಲಿ ಧಾರವಾಡದ ಚಿನ್ಮಯ ಪ.ಪೂ.ಕಾಲೇಜಿನ ಶ್ರಿಯಾ ಆರ್.ರೇವಣ್ಕರ್, ಮಂಗಳೂರಿನ ಶ್ರೀರಾಮ ಪ.ಪೂ.ಕಾಲೇಜಿನ ಪಿ.ರಕ್ಷಾ, ಧಾರವಾಡದ ಚೇತನ್ ಪ.ಪೂ.ವಿಜ್ಞಾನ ಕಾಲೇಜಿನ ತನಿಶಾ ಶೀತಲ್ ಗೋತಡ್ಕೆ, ಕೊಡಗಿನ ವಿವೇಕಾನಂದ ಪ.ಪೂ.ಕಾಲೀಜಿನ ಪ್ರಿಯಾಂಕ ನಾರಾಯಣ್, ಕುಂದಾಪುರ ಸರ್ಕಾರಿ ಪ.ಪೂ.ಕಾಲೇಜಿನ ದಿವ್ಯಾ ಆಯ್ಕೆಯಾದರು.

ವಿಜೇತ ಚೆಸ್ ಪಟುಗಳಿಗೆ ಬಹುಮಾನವನ್ನು ಪದವಿ ಪೂರ್ವ ಕಾಲೇಜುಗಳ ಉಪನಿರ್ದೇಶಕ ಕೆ.ನಾಗರಾಜ್, ಪ್ರಾಚಾರ್ಯರ ಸಂಘದ ಅಧ್ಯಕ್ಷ ಇಂದ್ರೇಶ್, ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಎಂ.ಡಿ.ಸುದರ್ಶನ್ ನೀಡಿದರು. ಕಾರ್ಯಕ್ರಮದಲ್ಲಿ ಎಂ.ಇ.ಎಸ್ ಪ.ಪೂ.ಕಾಲೇಜಿನ ಜಯಶ್ರೀ, ಸತೀಶ್ ಶಾಸ್ತ್ರೀ, ಮಿನಿ ಥಾಮಸ್, ಉಮಾಮಹೇಶ್ವರ್ ಇದ್ದರು.

ರಾಜ್ಯಮಟ್ಟದ ಈ ಕ್ರೀಡೆಯಲ್ಲಿ ಬಾಲಕ-ಬಾಲಕಿಯರ ವಿಭಾಗದಿಂದ ಒಟ್ಟು 320 ಮಂದಿ ವಿವಿಧ ಜಿಲ್ಲೆಗಳ ಚೆಸ್ ಪಟುಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News