ಪ್ರೌಢಶಾಲಾ ಮಕ್ಕಳ ಕುಸ್ತಿ ಪಂದ್ಯಾವಳಿ: ಉತ್ತರ ಕರ್ನಾಟಕದ ಯುವ ಪೈಲ್ವಾನರೇ ಮೇಲುಗೈ

Update: 2019-11-10 16:19 GMT

ಚಿಕ್ಕಮಗಳೂರು, ನ.10: ಪ್ರೌಢಶಾಲೆಗಳ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯ ಅಂತಿಮ ಹಂತ ಶನಿವಾರ ಸಂಜೆ ಪೂರ್ಣಗೊಂಡಿದ್ದು, ಉತ್ತರ ಕರ್ನಾಟಕದ ಯುವ ಪೈಲ್ವಾನರು ಪಂದ್ಯಾವಳಿಯಲ್ಲಿ ಮೇಲುಗೈ ಸಾಧಿಸಿ ರಾಷ್ಟ್ರ ಮಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಚಿಕ್ಕೋಡಿ, ಬಾಲಕಿಯರ ವಿಭಾಗದಲ್ಲಿ ಶಿರಸಿ, 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ದಾವಣಗೆರೆ, ಬಾಲಕಿಯರ ವಿಭಾಗದಲ್ಲಿ ಬಾಗಲಕೋಟೆ ಚಾಂಪಿಯನ್ ಆಗಿ ಹೊರಹೊಮ್ಮಿದವು.

ವಿಜೇತರ ವಿವರ

17 ವರ್ಷ ವಯೋಮಿತಿ ಫ್ರೀ ಸ್ಟೈಲ್ (ಬಾಲಕರು)

45 ಕೆಜಿ ವಿಭಾಗದಲ್ಲಿ ಬಾಗಲಕೋಟೆಯ ಕಾರ್ತಿಕ್ ತಲವಾರ್ (ಪ್ರ), ಉತ್ತರಕನ್ನಡದ ರೋಹನ್ ದೊಡ್ಡಮನಿ (ದ್ವಿ), ದಾವಣಗೆರೆಯ ಬಸವರಾಜ ಪರಪ್ಪ ಸಂತಿ, ಮಂಡ್ಯದ ಬಿ.ಪಿ.ರಾಜು (ತೃ). 48 ಕೆಜಿ ವಿಭಾಗದಲ್ಲಿ ಬಾಗಲಕೋಟೆಯ ಆದರ್ಶ ತೋಟದಾರ್ (ಪ್ರ), ಧಾರವಾಡದ ಮಲ್ಲಿಕಾರ್ಜುನ ಎಚ್.ತೊಲಮಟ್ಟಿ (ದ್ವಿ), ದಾವಣಗೆರೆಯ ಇ.ವಿರುಪಾಕ್ಷಿ (ತೃ).

65 ಕೆಜಿ ವಿಭಾಗದಲ್ಲಿ ಧಾರವಾಡದ ಮಲ್ಲಪ್ಪ ಎಂ.ಯಲ್ಲಟ್ಟಿ (ಪ್ರ), ಬಾಗಲಕೋಟೆಯ ಕೆಂಪನಗೌಡ ಕೆಂಪನ್ನವರ (ದ್ವಿ), ಬೆಳಗಾವಿಯ ಗಿರೀಶ್ ಎಂ.ಪಾಟೀಲ್, ಉತ್ತರಕನ್ನಡದ ಆನಂದ ಆನಗೋಜಿ (ತೃ). 71 ಕೆಜಿ ವಿಭಾಗದಲ್ಲಿ ಧಾರವಾಡದ ಬಾಪುಸಾಹೆಬ್ ಎಸ್.ಶಿಂಧೆ (ಪ್ರ), ದಾವಣಗೆರೆಯ ಜಿ.ವಿನಯ್ (ದ್ವಿ), ರಾಮನಗರದ ಡಿ.ಕೆ.ಭರತ್‍ಕುಮಾರ್, ಬಾಗಲಕೋಟೆಯ ಹರೀಶ್ ನಲವಡೆ (ತೃ).

80 ಕೆಜಿ ವಿಭಾಗದಲ್ಲಿ ಬೆಳಗಾವಿಯ ಚಿನ್ಮಯ್ ಎಸ್.ಪಾಟೀಲ್ (ಪ್ರ), ಬಳ್ಳಾರಿಯ ಕೆ.ಎಸ್.ಉಪೇಂದ್ರ (ದ್ವಿ), ಉಡುಪಿಯ ವಿವಾನ್ ಸಂಜಯ್ ನಾಯಕ್ (ತೃ). 92 ಕೆಜಿ ವಿಭಾಗದಲ್ಲಿ ಗೋಕಾಕ್‍ನ ಸುಮುಖ್ ಮಠಪತಿ (ಪ್ರ), ಮಂಗಳೂರಿನ ಕೆ.ಎಲ್.ಚರಣ್ ರೆಡ್ಡಿ (ದ್ವಿ), ಬೆಂಗಳೂರು ಗ್ರಾಮಾಂತರದ ಚನ್ನಕೇಶವ, ಬಾಗಲಕೋಟೆಯ ಪ್ರದೀಪ್ ಮಾಂಗಾ (ತೃ). 110 ಕೆಜಿ ವಿಭಾಗದಲ್ಲಿ ವಿಜಯಪುರದ ಸೈಯದ್ ಮಹಮದ್ (ಪ್ರ), ಬೆಂಗಳೂರಿನ ಸಿ.ಅಭಿನ್ (ದ್ವಿ), ಉಡುಪಿಯ ಕಾರ್ತಿಕ್ (ತೃ).

17 ವರ್ಷ ವಯೋಮಿತಿ ಫ್ರೀ ಸ್ಟೈಲ್ (ಬಾಲಕಿಯರು)

40 ಕೆಜಿ ವಿಭಾಗದಲ್ಲಿ ಶಿರಸಿಯ ಕಾವ್ಯ ರಟ್ಕೋಲ್ಕರ್ (ಪ್ರ), ಬಾಗಲಕೋಟೆಯ ಪ್ರತಿಕ್ಷಾ ವಂದ್ಯಾಲ (ದ್ವಿ), ಬೆಳಗಾವಿಯ ಜೆಂಡೆ ಸ್ವಾತಿ ಹೇಮಂತ್, ಗದಗ್‍ನ ಪ್ರಿಯಾಂಕ ಉರಿಗಾರ್ (ತೃ). 43 ಕೆಜಿ ವಿಭಾಗದಲ್ಲಿ ಗದಗ್‍ನ ಶ್ವೇತ ಜಾಧವ್ (ಪ್ರ), ಶಿವಮೊಗ್ಗದ ವಿ.ಬಿ.ಗಂಗಾವತಿ (ದ್ವಿ), ಚಿಕ್ಕೋಡಿಯ ಪ್ರೇಮ ಘೆವಾರಿ, ಶಿರಸಿಯ ರೂಪಾ ಕೊಲೇಕಾರ್ (ತೃ).

46 ಕೆಜಿ ವಿಭಾಗದಲ್ಲಿ ಶಿರಸಿಯ ಶಾಲಿನಾ ರಾಯರ ಸಿದ್ದಿ (ಪ್ರ), ಬಾಗಲಕೋಟೆಯ ಕಾವೇರಿ ಯಾದಹಳ್ಳಿ (ದ್ವಿ), ಗದಗ್‍ನ ಕೀರ್ತಿ ಮಿಸ್ಕಿನ್, ಚಿಕ್ಕೋಡಿಯ ಅಸ್ಮಿತಾ ಐ.ಪಾಟೀಲ್ (ತೃ). 49 ಕೆಜಿ ವಿಭಾಗದಲ್ಲಿ ಶಿರಸಿಯ ಗಾಯತ್ರಿ ಆರ್.ಸುತಾರ್ (ಪ್ರ), ಗದಗ್‍ನ ಸಂಗೀತಾ ಸೀತಾರಹಳ್ಳಿ (ದ್ವಿ), ಬೆಳಗಾವಿಯ ಅಂಕಿತ ಪಿ.ಜುಂಜವಾಡ್ಕರ್, ದಕ್ಷಿಣ ಕನ್ನಡದ ವೈಭವಿ (ತೃ).

53 ಕೆಜಿ ವಿಭಾಗದಲ್ಲಿ ಬೆಳಗಾವಿಯ ಕೆ.ಸ್ವಾತಿ (ಪ್ರ), ಶಿರಸಿಯ ರಕ್ಷಿತಾ ಎನ್.ಸೂರ್ಯವಂಶಿ (ದ್ವಿ), ಚಿಕ್ಕೋಡಿಯ ವೀಣಾ ಆರ್.ಸವಸುದ್ದಿ, ಬಾಗಲಕೋಟೆಯ ಐಶ್ವರ್ಯ ಭಾಗಿ (ತೃ). 57 ಕೆಜಿ ವಿಭಾಗದಲ್ಲಿ ಬೆಳಗಾವಿಯ ಎಂ.ಎ.ಕುಸುಮ (ಪ್ರ), ಬಾಗಲಕೋಟೆಯ ಅಂಜಲಿ ಪತ್ತರ್ (ದ್ವಿ), ಶಿರಸಿಯ ಸ್ವಾತಿ ಅಣ್ಣಿಕೇರಿ, ಚಿಕ್ಕೋಡಿಯ ಶ್ರೇಯಾ ವಿ ಕಾಮಟೆ (ತೃ).

61 ಕೆಜಿ ವಿಭಾಗದಲ್ಲಿ ಮೈಸೂರಿನ ಎನ್.ಲಾವಣ್ಯ (ಪ್ರ), ಬೆಳಗಾವಿಯ ಅನಿತ ಪಿ.ಕುರುಬರ್ (ದ್ವಿ), ಧಾರವಾಡದ ಲಕ್ಷ್ಮಿ ಕಲ್ಲೂರ್ (ತೃ). 65 ಕೆಜಿ ವಿಭಾಗದಲ್ಲಿ ಬೆಂಗಳೂರಿನ ಕೆ.ಚೈತ್ರ (ಪ್ರ), ಬಾಗಲಕೋಟೆಯ ಧೌರವ್ವ ನಂದೇಗೊಲ್ (ದ್ವಿ), ಶಿವಮೊಗ್ಗದ ಕವನ ಎಂ.ರಾಯರ್, ದಾವಣಗೆರೆಯ ಎಚ್.ಎಸ್.ಗೌರಿ (ತೃ). 69 ಕೆಜಿ ವಿಭಾಗದಲ್ಲಿ ಚಿಕ್ಕೋಡಿಯ ರಶೀದಾ ಫಕ್ರುದ್ದೀನ್ ನದಾಫ್ (ಪ್ರ), ವಿಜಯಪುರದ ಆರತಿ ನಾವಿ (ದ್ವಿ), ದಕ್ಷಿಣ ಕನ್ನಡದ ಪ್ರತೀಕ್ಷಾ (ತೃ). 73 ಕೆಜಿ ವಿಭಾಗದಲ್ಲಿ ಬೆಳಗಾವಿಯ ಕಿರಣ್ ಎ.ಗುರುವ (ಪ್ರ), ರಾಮನಗರದ ಆರ್.ಶ್ರೇಯಾ (ದ್ವಿ) ಚಿಕ್ಕೋಡಿಯ ಕಾವೇರಿ ಶಿವಾಜಿ ಮನಗುತ್ತೆ (ತೃ).

17 ವರ್ಷ ವಯೋಮಿತಿ- ಗ್ರೀಕೋ ರೋಮನ್ (ಬಾಲಕರು)

45 ಕೆಜಿ ವಿಭಾಗದಲ್ಲಿ ಬಾಗಲಕೋಟೆಯ ಪ್ರಶಾಂತ್ ಛಲವಾದಿ (ಪ್ರ), ದಾವಣಗೆರೆಯ ಕೆ.ಅರ್ಜುನ (ದ್ವಿ), ಉತ್ತರಕನ್ನಡದ ಪಾಂಡುರಂಗ ದಾಮುನಿಕರ, ಧಾರವಾಡದ ಶ್ರೀನಿವಾಸ ಅಣ್ಣೋಜಿ (ತೃ). 48 ಕೆಜಿ ವಿಭಾಗದಲ್ಲಿ ದಾವಣಗೆರೆಯ ಕೊರವರ ಸಂಜೀವನ (ಪ್ರ), ಧಾರವಾಡದ ಗುರುನಾಥ್ ಸುಳ್ಳದ (ದ್ವಿ), ಬಾಗಲಕೋಟೆಯ ದರ್ಶನ್ ಅದೇಕರ್, ಬೆಳಗಾವಿಯ ಅವಧೂತ್ ಪಾಟೀಲ್ (ತೃ).

51 ಕೆಜಿ ವಿಭಾಗದಲ್ಲಿ ಬೆಳಗಾವಿಯ ಪವನ್ ಪಾಂಡುರಂಗ ಗುರುವ್ (ಪ್ರ), ಉತ್ತರಕನ್ನಡದ ಸುಲೇಮಾನ್ ಸಾಬ್ ದೇವಕಾರಿ (ದ್ವಿ), ಬಾಗಲಕೋಟೆಯ ಲೋಹಿತ್‍ಕುಮಾರ್, ಬೆಳಗಾವಿಯ ಧ್ಯಾನೇಶ್ವರ್ ಆಗಮೋಜಿ (ತೃ). 55 ಕೆಜಿ ವಿಭಾಗದಲ್ಲಿ ಬೆಳಗಾವಿಯ ಭರತ್ ಕುಡ್ಡೆಮ್ಮಿ (ಪ್ರ), ಧಾರವಾಡದ ಅಭಿಷೇಕ್ ಹೂಗಾರ್ (ದ್ವಿ), ದಾವಣಗೆರೆಯ ಸಿ.ಡಿ.ಭೀಮಲಿಂಗೇಶ್ವರ, ವಿಜಯಪುರದ ಶ್ರೀಕಾಂತ್ ಗೋಂಧಳಿ (ತೃ). 60 ಕೆಜಿ ವಿಭಾಗದಲ್ಲಿ ವಿಜಯಪುರದ ರಾಘವೇಂದ್ರ ವಾಲಿಕರ್ (ಪ್ರ), ಬೆಳಗಾವಿಯ ಸೂರಜ್ ಪಾಟೀಲ್ (ದ್ವಿ), ಗದಗ್‍ನ ನಿತಿನ್ ವಸಂತ್ ಸಿದ್ದಮನಹಳ್ಳಿ, ಮುತ್ತು ರಮೇಶ್ ಭಾವಿ (ತೃ).

65 ಕೆಜಿ ವಿಭಾಗದಲ್ಲಿ ಬೆಳಗಾವಿಯ ತಿಮ್ಮನಗೌಡ ಬಿ.ಪಾಟೀಲ್ (ಪ್ರ), ಅಮಿತ್ ಕಾಂಬಳೆ (ದ್ವಿ), ಮೈಸೂರಿನ ಯಾಸಿನ್ ಅನ್ಸಾರಿ, ಬಾಗಲಕೋಟೆಯ ಗಣೇಶ್ ಚೌಹಾಣ್ (ತೃ). 71 ಕೆಜಿ ವಿಭಾಗದಲ್ಲಿ ಧಾರವಾಡದ ಅಶೋಕ್ ಮಾಕಣ್ಣನವರ (ಪ್ರ), ಬೆಳಗಾವಿಯ ವೀರೇಶ್ ಯಂಕಂಚಿ (ದ್ವಿ), ಬಾಗಲಕೋಟೆಯ ಶ್ರವಣ್ ಕೆ.ಹಾದಿಮನಿ, ಮೈಸೂರಿನ ಮಹಮದ್ ರೋಷನ್ (ತೃ).

80 ಕೆಜಿ ವಿಭಾಗದಲ್ಲಿ ದಾವಣಗೆರೆಯ ಹನುಮಂತ ಮಾಳಪ್ಪ ಸಾವಳಗಿ (ಪ್ರ), ಬಾಗಲಕೋಟೆಯ ವರುಣ್ ಅಥಣಿಮಠ (ದ್ವಿ), ಗದಗ್‍ನ ಹನುಮಂತ ಲಮಾಣಿ, ಹಾವೇರಿಯ ಅಭಿಷೇಕ್ ಮೇಲ್ಮುರಿ (ತೃ).  92 ಕೆಜಿ ವಿಭಾಗದಲ್ಲಿ ಬೆಳಗಾವಿಯ ಪ್ರಥಮೇಶ್ ಸಾತುಗೊಂಡ ಪಾಟೀಲ್ (ಪ್ರ), ಬೆಳಗಾವಿಯ ಸಾಗರ್ ಎಸ್.ತಗ್ಗಿ (ದ್ವಿ), ಮೈಸೂರಿನ ಶಪತ್ ಅನ್ಸಾರಿ (ತೃ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News