ಶುಲ್ಕ ಏರಿಕೆ ವಿರುದ್ಧ ಆಕ್ರೋಶ

Update: 2019-11-11 18:00 GMT

ಹಾಸ್ಟೆಲ್ ಶುಲ್ಕದಲ್ಲಿ ಶೇ.ಮೂನ್ನೂರು ಪಟ್ಟು ಏರಿಕೆ, ವಸ್ತ್ರಸಂಹಿತೆ ಮತ್ತಿತರ ಕರಡು ಪ್ರಸ್ತಾವನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಜೆಎನ್‌ಯು ವಿದ್ಯಾರ್ಥಿಗಳು ಸೋಮವಾರ ವಿವಿಯ ಘಟಿಕೋತ್ಸವ ಕಾರ್ಯಕ್ರಮ ನಡೆಯುವ ಸಭಾಂಗಣದತ್ತ ಮುನ್ನುಗ್ಗಿದಾಗ ಪೊಲೀಸರು ಜಲಫಿರಂಗಿ ಬಳಸಿ ಅವರನ್ನು ತಡೆಯುವ ಪ್ರಯತ್ನ ನಡೆಸಿರುವುದಾಗಿ ವರದಿಯಾಗಿದೆ. ಹಾಸ್ಟೆಲ್ ಶುಲ್ಕವನ್ನು ಸುಮಾರು 300 ಶೇ.ದಷ್ಟು ಏರಿಕೆ ಮಾಡುವ ಪ್ರಸ್ತಾವನೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ವಾಸಿ ಸುವ ವಿದ್ಯಾರ್ಥಿಗಳಲ್ಲಿ ಕನಿಷ್ಠ 40 ಶೇ. ವಿದ್ಯಾರ್ಥಿಗಳು ಬಡ ಕುಟುಂಬವರು. ಈಗ ಮಾಸಿಕ 2,500 ರೂ. ಹಾಸ್ಟೆಲ್ ಶುಲ್ಕವಿದ್ದು ಇದನ್ನು 7000 ರೂ.ಗೆ ಹೆಚ್ಚಿಸಿದರೆ ಬಡ ವಿದ್ಯಾರ್ಥಿಗಳು ಪಾವತಿಸಲು ಸಾಧ್ಯವೇ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ಮತ್ತಿತರ ನಿಯಮಗಳನ್ನೂ ವಿದ್ಯಾರ್ಥಿಗಳು ವಿರೋಧಿಸುತ್ತಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳ ಲಾಗಿದೆ ಎಂಬುದು ವಿದ್ಯಾರ್ಥಿಗಳ ವಾದವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor