ವಿಜೃಂಭಣೆಯ ಬಿಂಡೇನಹಳ್ಳಿ ತೆಪ್ಪೋತ್ಸವ: ಶಾಸಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Update: 2019-11-11 19:03 GMT

ನಾಗಮಂಗಲ, ನ.11: 20 ವರ್ಷಗಳ ಬಳಿಕ ತುಂಬಿ ಹರಿದ ಬಿಂಡೇನಹಳ್ಳಿ ಕೆರೆಯಲ್ಲಿ ಆಯೋಜಿಸಲಾಗಿದ್ದ ಸಂಭ್ರದ ತೆಪ್ಪೋತ್ಸವದ ವೇಳೆ ಹುಡುಗಾಟಕ್ಕೆ ಈಜಲು ನೀರಿಗೆ ಬಿದ್ದು ಸುಸ್ತಾಗಿ ಮುಳುಗುತ್ತಿದ್ದಾಗ ಜನರ ಚೀರಾಟ ಮತ್ತು ಶಾಸಕ ಸುರೇಶ್‍ ಗೌಡರ ಸಮಯ ಪ್ರಜ್ಞೆಯಿಂದ ಯುವಕನೋರ್ವ ಬದುಕುಳಿದ  ಘಟನೆ ನಡೆದಿದೆ.

ತಾಲೂಕಿನ ದೇವಲಾಪುರ ಹೋಬಳಿ ಬಿಂಡೇನಹಳ್ಳಿ ಗ್ರಾಮದ ಅಭಿ ಎಂಬಾತನೇ ನೀರಿನಲ್ಲಿ ಮುಳುಗಿ ಸಾವಿನ ದವಡೆಯಿಂದ ಪಾರಾದ ವ್ಯಕ್ತಿಯಾಗಿದ್ದಾನೆ. ಗ್ರಾಮದಲ್ಲಿ ಹಬ್ಬದ ವಾತಾವರಣದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ತಾಲೂಕು ಪಂಚಾಯತ್ ಸದಸ್ಯ ಮೈತ್ರಿ ಕೃಷ್ಣೇಗೌಡರ ಆಶಯದಂತೆ  ಕೃಷ್ಣದೇವರ ತೆಪ್ಪೋತ್ಸವ ಏರ್ಪಡಿಸಲಾಗಿತ್ತು. ವಿವಿಧ ದೇವರ ಮೂರ್ತಿಗಳನ್ನ ಇರಿಸಲಾಗಿದ್ದ ತೆಪ್ಪೋತ್ಸವವನ್ನ ಶಾಸಕ ಸುರೇಶ್‍ಗೌಡ ಉದ್ಘಾಟಿದರು.

ನಂತರ, ಎಲೆಕ್ಟ್ರಾನಿಕ್ ಯಂತ್ರದ ದೋಣಿಯಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಮತ್ತು ಪಡಿತರ ವಿತರಕರ ಸಂಘದ ರಾಜ್ಯಾದ್ಯಕ್ಷ ಟಿ.ಕೃಷ್ಣಪ್ಪ ಕೆರೆಯಲ್ಲಿ ತೆಪ್ಪದೊಂದಿಗೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ ನೀರಿಗಿಳಿದ ಇಬ್ಬರು ಯುವಕರಲ್ಲಿ ಈಜಿ ಸುಸ್ತಾದ ಅಭಿ ಎಂಬಾತ ಕಾಪಾಡಿ, ಕಾಪಾಡಿ ಎಂದು ಕೂಗಿಕೊಂಡಿದ್ದಾನೆ. ನೆರದಿದ್ದ ಜನಸ್ತೋಮದ ಚೀರಾಟ ಮತ್ತು ಕೈಸನ್ನೆ ಕಂಡು ತಕ್ಷಣವೇ ಹಿಂದಿರುಗಿದ ಶಾಸಕ ಸುರೇಶ್‍ಗೌಡ ಮುಳುಗುತ್ತಿದ್ದ ಯುವಕನನ್ನು ದೋಣಿಯೊಳಕ್ಕೆ ಎಳೆದುಕೊಂಡು ಕಾಪಾಡಿದ್ದಾರೆ.  

ಶಾಸಕರ ವಿರುದ್ದ ಕಳಪೆ ಗಾಮಗಾರಿ ಆರೋಪ: ಜೆಡಿಎಸ್‍ನಲ್ಲಿ ಅಸಮದಾನ ಸ್ಪೋಟ

ತಾಲೂಕಿನಲ್ಲಿ ಉತ್ತಮ ಮಳೆಗೆ ಕೆರೆಕಟ್ಟೆ ತುಂಬಿ ಹರಿಯುತ್ತಿದ್ದು ವಿಜೃಂಭಣೆಯ ತೆಪ್ಪೋತ್ಸವ ಕಾರ್ಯಕ್ರಮದಗಳು ನಡೆಯುತ್ತಿವೆ. ಯಾವೊಂದು ಕಾರ್ಯಕ್ರಮಕ್ಕೂ ತಮ್ಮನ್ನ ಆಹ್ವಾನಿಸುತ್ತಿಲ್ಲ, ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ತಮ್ಮದೇ ಪಕ್ಷದ ಶಾಸಕ ಸುರೇಶ್‍ಗೌಡರ ವಿರುದ್ಧ ಎಂಎಲ್‍ಸಿ ಅಪ್ಪಾಜಿಗೌಡ ಮತ್ತು ಮಾಜಿ ಸಂಸದ ಶಿವರಾಮೇಗೌಡ ಕಾರ್ಯಕ್ರಮದ ವೇಳೆಯಲ್ಲೆ ಆಕ್ರೋಶ ಹೊರಹಾಕಿದ್ದಾರೆ. 

ಬಿಂಡೇನಹಳ್ಳಿ ನಡೆಯುತ್ತಿದ್ದ ತೆಪ್ಪೋತ್ಸವದ ವಿಚಾರ ತಿಳಿದು ತಡವಾಗಿ ಆಗಮಿಸಿದ ಈ ನಾಯಕರು ಮಾಧ್ಯಮದವರೊಂದಿಗೆ ಮಾತನಾಡಿರು. ಕ್ಷೇತ್ರದಲ್ಲಿ  ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 9 ಕೋಟಿ ವೆಚ್ಚದ ಕಾಮಗಾರಿ, ಕೆರೆಕಟ್ಟೆ ಹೂಳೆತ್ತುವುದು, ನೀರಾವರಿ ಇಲಾಖೆಯಲ್ಲಿ ಸಂಪೂರ್ಣ ಕಳಪೆ ಕಾಮಗಾರಿ ಮಾಡಲಾಗುತ್ತಿದೆ. ಯಾರಪ್ಪನ ಮನೆ ದುಡ್ಡಲ್ಲ. ಪಕ್ಷದ ಶಾಸಕರು ಮುಖ್ಯವಲ್ಲ, ಕೆಲಸ ಮಾಡದೆ ಬಿಲ್ ಬರೆಯುತ್ತಿರುವುದು ಗೊತ್ತಿದೆ. ಶಾಸಕರು ಕುಮ್ಮಕ್ಕಿನಿಂದ ಗುತ್ತಿಗೆ ದಾರರು ಲೂಟಿ ಮಾಡುತ್ತಿದ್ದಾರೆ. ತನಿಖೆಗೆ ಒತ್ತಾಯಿಸುತ್ತೇವೆ ಎಂದು ಅಪ್ಪಾಜಿಗೌಡ ಆಕ್ರೋಶ ಹೊರಹಾಕಿದ್ದಾರೆ.

ಇದೇ ಧಾಟಿಯಲ್ಲೆ ಶಿವರಾಮೇಗೌಡ ಕೂಡ, ಶಾಸಕರು ನಮ್ಮನ್ನ, ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ದೇವೇಗೌಡರ ಅಣತಿಯಂತೆ ಚುನಾಣೆಯಲ್ಲಿ ದುಡಿದು ಗೆಲ್ಲಿಸಿರುವುದನ್ನು ನೆನಪಿಟ್ಟುಕೊಂಡು ನಡೆದುಕೊಳ್ಳಬೇಕು ಎಂದು ಅಸಮಧಾನ ಹೊರಹಾಕಿದರು. ಇಷ್ಟೆಲ್ಲಾ ನಡೆದರೂ ಶಾಸಕರು ಮಾತ್ರ ಮುಂಚೆಯೇ ಜನತೆಗೆ ಶುಭಾಶಯ ಕೋರಿ ಜಾಣ್ಮೆಯಿಂದ ಹೊರನಡೆದಿದ್ದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್‍ನಾರಾಯಣ, ತಾಪಂ ಸದಸ್ಯ ಮೈತ್ರಿ ಕೃಷ್ಣೇಗೌಡ, ಅಪಾರ ಜನರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News