ಕೆಎಸ್‌ಆರ್‌ಟಿಸಿಗೆ ಸಿಮ್ಯಾಕ್ ಅತ್ಯುತ್ತಮ ಉಪಕ್ರಮ ಪ್ರಶಸ್ತಿ

Update: 2019-11-13 18:16 GMT

ಬೆಂಗಳೂರು, ನ.13: ಕೆಎಸ್‌ಆರ್‌ಟಿಸಿಗೆ ಪ್ರತಿಷ್ಠಿತ ಸಿಮ್ಯಾಕ್ ಅತ್ಯುತ್ತಮ ಉಪಕ್ರಮ ಪ್ರಶಸ್ತಿ ವರ್ಗದಲ್ಲಿ ಪ್ರಥಮ ಮತ್ತು ಪೌರಾಡಳಿತದ ಅತ್ಯುತ್ತಮ ಉಪಕ್ರಮ ಪ್ರಶಸ್ತಿ ವರ್ಗದಲ್ಲಿ ಪ್ರಥಮ ಬಹುಮಾನದ ಪ್ರಶಸ್ತಿಯೊಂದಿಗೆ 1ಲಕ್ಷ ರೂ. ನಗದು ಪುರಸ್ಕಾರ ಲಭಿಸಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಕೆಎಸ್‌ಆರ್‌ಟಿಸಿ ನಿಗಮವು ಅನುಷ್ಠಾನಗೊಳಿಸಿರುವ ಸುರಕ್ಷತಾ ಉಪಕ್ರಮಗಳ ಯಶಸ್ವಿ ಅನುಷ್ಠಾನ, ಅತ್ಯಾಧುನಿಕ ವಿಶ್ವದರ್ಜೆಯ ಸಿಮ್ಯುಲೇಟರ್‌ನಿಂದ ಚಾಲನಾ ತರಬೇತಿಯ ಉಪಕ್ರಮಕ್ಕೆ ಈ ಪ್ರಶಸ್ತಿ ಮತ್ತು ರಸ್ತೆ ಸುರಕ್ಷತೆಗೆ ಸಂಬಂಧಪಟ್ಟ ಮತ್ತೊಂದು ಉಪಕ್ರಮಕ್ಕೆ ವಿಶೇಷ ವರ್ಗದಲ್ಲಿ ಪ್ರಮಾಣ ಪತ್ರ ಸಹ ಲಭಿಸಿದೆ.

ಸಚಿವ ಆರ್.ಅಶೋಕ್, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರು ಬೆಂಗಳೂರು ಕೇಂದ್ರೀಯ ವಿಭಾಗದ ದೇವೇಂದ್ರಚಾರಿ ಚಾಲಕಬಿಲ್ಲೆ ಸಂಖ್ಯೆ- 1002, ಘಟಕ-4 ಮತ್ತು ಬಿ.ಜೆ. ನಮಾಜಿ, ಚಾಲಕಬಿಲ್ಲೆ ಸಂಖ್ಯೆ-876, ಘಟಕ-2 ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News