ರಶ್ಯ ಕಾಲೇಜಿನಲ್ಲಿ ವಿದ್ಯಾರ್ಥಿಯಿಂದ ಗುಂಡು: ಓರ್ವ ಸಾವು; ಮೂವರಿಗೆ ಗಾಯ

Update: 2019-11-14 17:20 GMT
ಫೋಟೋ: latimes.com

ಮಾಸ್ಕೋ, ನ. 14: ರಶ್ಯದ ಫಾರ್ ಈಸ್ಟ್‌ನಲ್ಲಿ ಗುರುವಾರ ಉದ್ಯೋಗ ತರಬೇತಿ ಕಾಲೇಜೊಂದರಲ್ಲಿ 19 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯೊಬ್ಬನನ್ನು ಗುಂಡು ಹಾರಿಸಿ ಕೊಂದು ಮೂವರನ್ನು ಗಾಯಗೊಳಿಸಿದ್ದಾನೆ. ಬಳಿಕ ಅವನು ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರಶ್ಯ ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ರಶ್ಯದಲ್ಲಿ ಕಠಿಣ ಬಂದೂಕು ನಿಯಮಾವಳಿಗಳಿದ್ದು, ಅಲ್ಲಿನ ಶಾಲೆ ಮತ್ತು ಕಾಲೇಜುಗಳಲ್ಲಿ ಗುಂಡು ಹಾರಾಟದ ಘಟನೆಗಳು ಅಪರೂಪವಾಗಿವೆ. ಹಂತಕನ ಉದ್ದೇಶ ಏನು ಎನ್ನುವುದು ಗೊತ್ತಾಗಿಲ್ಲ

ರಶ್ಯ ರಾಜಧಾನಿ ಮಾಸ್ಕೋದ ಪೂರ್ವಕ್ಕೆ ಸುಮಾರು 5,600 ಕಿ.ಮೀ. ದೂರದಲ್ಲಿ ಚೀನಾ ಗಡಿಯ ಸಮೀಪದಲ್ಲಿರುವ ಬ್ಲಾಗೊವೆಶ್ಚೆಂಕ್ಸ್ ನಗರದಲ್ಲಿರುವ ಕಾಲೇಜಿನಲ್ಲಿ ವಿದ್ಯಾರ್ಥಿಯು ಬೇಟೆಯಲ್ಲಿ ಬಳಸುವ ರೈಫಲ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಗಾಯಗೊಂಡವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News